ತೇಗು ಮನುಷ್ಯನಿಗೆ ಇರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಈ ತೇಗು ಅಬ್ಬಬ್ಬಾ ಅಂದರೆ ಒಂದಿನ ಇರಬಹುದು. ಕೆಲವರಿಗೆ ಇದು ಎರಡು ದಿನಗಳವರೆಗೆ ಹೋಗಬಹುದು. ಆದರೆ ಬ್ರಿಟನ್ನ ಒಬ್ಬ ವ್ಯಕ್ತಿಗೆ ಇದು 8 ತಿಂಗಳವರೆಗೆ ಮುಂದುವರಿದಿದೆ.
ಎರಡು ಮಕ್ಕಳ ತಂದೆಯಾಗಿರುವ ಮೈಕೆಲ್ ಈ ಹಿಂದೆ ಕ್ಯಾಬ್ ಡ್ರೈವರ್ ಆಗಿದ್ದರು. ಈತ ಕಳೆದ 8 ತಿಂಗಳಿನಿಂದ ತೇಗಿನ ಸಮಸ್ಯೆ ಎದುರಿಸುತ್ತಲೇ ಇದ್ದು ನಿಮಿಷದಿಂದ ನಿಮಿಷಕ್ಕೆ ಬರ್ತಾನೇ ಇರುತ್ತಂತೆ.
ಪ್ರತಿ 7 ನಿಮಿಷಕ್ಕೆ ಒಮ್ಮೆ ಈ ಸಮಸ್ಯೆ ಬರ್ತಿರೋದನ್ನ ಗಮನಿಸಿದ ಮೈಕೆಲ್ ಆಸ್ಪತ್ರೆಗಳಿಗೂ ಭೇಟಿ ನೀಡಿದ್ದಾರೆ. ಆದರೆ ದಿನದಿಂದ ದಿನಕ್ಕೆ ಈ ತೇಗಿನ ಶಬ್ದ ಹೆಚ್ಚಾಗುತ್ತಲೇ ಹೋಗಿದೆ.
61 ವರ್ಷದ ಈ ವ್ಯಕ್ತಿಯ ಸಮಸ್ಯೆ ವೈದ್ಯ ಲೋಕಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ಜೂನ್ 2020ರಂದು ಒಂದು ಲೋಟ ಚಹ ಕುಡಿದ ಬಳಿಕ ಮೈಕೆಲ್ಗೆ ಈ ಸಮಸ್ಯೆ ಶುರುವಾಗಿತ್ತಂತೆ. ಅಲ್ಲಿಂದ ಈ ಸಮಸ್ಯೆ ನಿಂತೇ ಇಲ್ವಂತೆ.