alex Certify ಕದ್ದ ಚಪ್ಪಲಿಗಳೊಂದಿಗೆ ಸುಖಿಸುತ್ತಿದ್ದ ವಿಕೃತ ಕಾಮಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕದ್ದ ಚಪ್ಪಲಿಗಳೊಂದಿಗೆ ಸುಖಿಸುತ್ತಿದ್ದ ವಿಕೃತ ಕಾಮಿ ಅರೆಸ್ಟ್

ಥಾಯ್ಲೆಂಡ್ ವ್ಯಕ್ತಿಯೊಬ್ಬ ಈಗ ವಿಚಿತ್ರ ಕಾರಣಕ್ಕೆ ಜಗತ್ತಿನ ಗಮನ ಸೆಳೆದಿದ್ದಾನೆ.

24 ವರ್ಷದ ತ್ರೀರಾಪತ್ ಕ್ಲಾಯ್ ಎಂಬಾತನನ್ನು ಪೊಲೀಸರು ಚಪ್ಪಲಿ ಕಳ್ಳತನದ ಕಾರಣಕ್ಕೆ ಬಂಧಿಸಿದ್ದಾರೆ. ಆತ ಯಾವ ಕಾರಣಕ್ಕೆ ಚಪ್ಪಲಿ ಕದಿಯುತ್ತಾನೆಂದು ಕಾರಣ ಕೇಳಿ ದಂಗಾಗಿದ್ದಾರೆ.

ಚಪ್ಪಲಿ ಕಳ್ಳತನದ ಬಗ್ಗೆ ನಿರಂತರವಾಗಿ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಈತನನ್ನು ಬಂಧಿಸಿದ್ದರು. ಆತನ ಮನೆಯನ್ನು ನೋಡಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಆತ ಕಳೆದ ಎರಡು ವರ್ಷಗಳಿಂದ ನೆರೆಹೊರೆಯವರ ಮನೆಗಳಿಂದ ಕದ್ದಿದ್ದ ಚಪ್ಪಲಿಗಳನ್ನು ಕೂಡಿಟ್ಟಿದ್ದ. ಅಲ್ಲಿ ವಿಭಿನ್ನ ಬಣ್ಣದ, ವಿಭಿನ್ನ ಬ್ರಾಂಡ್ ಗಳ ಪಾದರಕ್ಷೆ ಇದ್ದವು.

ಆಘಾತಕಾರಿ ಎಂದರೆ ಲೈಂಗಿಕ ತೃಷೆಗಾಗಿ ಈ ಕಳ್ಳ ಕದ್ದ ಪಾದರಕ್ಷೆಗಳಿಗೆ, ಮುತ್ತಿಟ್ಟು ಅಪ್ಪಿ ಮುದ್ದಾಡುತ್ತ ವಿಲಕ್ಷಣವಾಗಿ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಮನೆಯಲ್ಲಿ 126 ಜತೆ ಪಾದರಕ್ಷೆ ಸಿಕ್ಕಿದೆ. ಚಪ್ಪಲಿ ಕದ್ದ ಆರೋಪದ ಜೊತೆಗೆ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ ಮೂರು ಪ್ರಕರಣಗಳನ್ನು ಆತನ ಮೇಲೆ ದಾಖಲಿಸಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...