ದೇಣಿಗೆ ಸಂಗ್ರಹಕ್ಕಾಗಿ ಇಲ್ಲೊಬ್ಬ ವ್ಯಕ್ತಿ ವಿಶೇಷ ಸಾಹಸ ಮಾಡಿದ್ದಾರೆ. ಜೆಸ್ಸಿ ಲಾರಿಯೊಸ್ ಎಂಬ 33 ವರ್ಷದ ವ್ಯಕ್ತಿ ಟೆಡ್ಡಿಬೇರ್ ಸೂಟ್ ಧರಿಸಿ ಬರೋಬ್ಬರಿ 644 ಕಿ.ಮೀ. ನಡೆದಿದ್ದಾರೆ. ಒಬ್ಬರೇ ಹೆಜ್ಜೆಹಾಕಿದರೂ ವಿಶ್ವದ ವಿವಿಧ ಕಡೆಯಿಂದ ಅಭಿಮಾನಿಗಳನ್ನು ಪಡೆದುಕೊಂಡರು.
ಲಾಸ್ ಏಂಜಲೀಸ್ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟ ಅವರು ಈವರೆಗೆ 7,100 ಡಾಲರ್ ದೇಣಿಗೆ ಸಂಗ್ರಹಿಸುವಲ್ಲಿ ಸಫಲರಾಗಿದ್ದಾರೆ.
ಜುಲೈ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಓಲಾ ಇ ಸ್ಕೂಟರ್
ದೇಣಿಗೆ ಹಣವನ್ನು ಯಾರು ಸ್ವೀಕರಿಸುತ್ತಾರೆ ಎಂಬುದನ್ನು ನಿರ್ಧರಿಸಲು ಜೆಸ್ಸಿ ಜಾಲತಾಣದಲ್ಲಿ ಆನ್ಲೈನ್ ಮತ ಸಂಗ್ರಹದ ಮೂಲಕ ಅಭಿಪ್ರಾಯ ಪಡೆದುಕೊಳ್ಳುವರು.