ಯುಕೆಯ ವೇಲ್ಸ್ ರಾಷ್ಟ್ರದಲ್ಲಿ ಅಗತ್ಯ ವಸ್ತುಗಳನ್ನ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದ ಸರ್ಕಾರದ ವಿರುದ್ಧ ವ್ಯಕ್ತಿಯೊಬ್ಬ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾನೆ. ಒಳಉಡುಪು ಹಾಗೂ ಮಾಸ್ಕ್ ಮಾತ್ರ ಧರಿಸಿ ಸೂಪರ್ಮಾರ್ಕೆಟ್ ಒಳಗೆ ನುಗ್ಗಲು ಯತ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾನೆ.
38 ವರ್ಷದ ಕ್ರಿಸ್ ನೋಡೆನ್ ಎಂಬಾತ ಒಳಉಡುಪನ್ನ ಮಾತ್ರ ಧರಿಸಿ ಸೂಪರ್ಮಾರ್ಕೆಟ್ ಒಳಗೆ ನುಗ್ಗಲು ಯತ್ನಿಸಿದ ವೇಳೆ ಸೆಕ್ಯೂರಿಟಿ ಗಾರ್ಡ್ ಪ್ರವೇಶಕ್ಕೆ ನಿರಾಕರಿಸಿದ್ದಾನೆ. ಆದರೂ ಕೂಡ ಕ್ರಿಸ್ ಮಾಸ್ಕ್ ಹಾಗೂ ಒಳ ಉಡುಪನ್ನ ಧರಿಸಿ ಸೂಪರ್ ಮಾರ್ಕೆಟ್ ತುಂಬೆಲ್ಲ ಓಡಾಡಿದ್ದಾನೆ.
ದೇಶದಲ್ಲಿ ಕರೊನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ವೇಲ್ಸ್ ಸರ್ಕಾರ 17 ದಿನಗಳ ಫೈರ್ಬ್ರೇಕ್ ಎಂಬ ಕಠಿಣ ಲಾಕ್ಡೌನ್ ಜಾರಿಗೆ ತಂದಿದೆ. ಇದರನ್ವಯ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.