
ಮೊಟ್ಟೆ ಆಮ್ಲೆಟ್ ಮೇಲೆ ಸ್ವಲ್ಪ ಮೆಣಸಿನಪುಡಿ ಹೆಚ್ಚಾಗಿದ್ದನ್ನು ವ್ಯಾಕ್ಯೂಮ್ ಕ್ಲೀನರ್ ಬಳಸಿ ತೆಗೆದ ವಿಡಿಯೋವೊಂದು ಈಗ ಸದ್ದು ಮಾಡುತ್ತಿದೆ. ದಕ್ಷಿಣ ಆಫ್ರಿಕಾದ ಸ್ಗುಜಾನಾ ಎಂಬ ವ್ಯಕ್ತಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಮಜಾ ಏನಪ್ಪಾ ಅಂದ್ರೆ, ಮೊಟ್ಟೆ ಮೇಲಿರುವ ಮೆಣಸಿನಪುಡಿಯನ್ನು ಸಕ್ ಮಾಡಿ ತೆಗೆಯಲು ಹಿಡಿದ ವ್ಯಾಕ್ಯೂಮ್ ಕ್ಲೀನರ್‌ನ ಮೂತಿ ಇಡೀ ಮೊಟ್ಟೆಯನ್ನೇ ತನ್ನೊಡಲಿಗೆ ಎಳೆದುಕೊಂಡುಬಿಟ್ಟಿದೆ!