
ಪಾರ್ಕಿಂಗ್ ಮಾಡಲು ಸ್ಲಾಟ್ ಪಡೆಯಲು ಪರದಾಟ ನಡೆಸಿದ ಅನುಭವ ಗೊತ್ತೇ ಇರಬೇಕಲ್ಲ…? ಇಲ್ಲೊಬ್ಬ ವ್ಯಕ್ತಿ ಪಾರ್ಕಿಂಗ್ ಸ್ಪಾಟ್ ಒಂದನ್ನು ಮೀಸಲಿಟ್ಟುಕೊಳ್ಳಲು ಹೆಪ್ಪುಗಟ್ಟಿದ ತನ್ನ ಪ್ಯಾಂಟನ್ನೇ ಬಳಸಿದ್ದಾನೆ.
ಷಿಕಾಗೋದ ವೆಸ್ಟ್ ರಿಡ್ಜ್‌ನ ಅಡಮ್ ಸೆಲ್ಝರ್ ಹಸರಿನ ಈತ ತನ್ನ ಪ್ಯಾಂಟುಗಳನ್ನು ಮರುಗಟ್ಟಸಿ, ತನ್ನಿಂತಾನೇ ನಿಂತುಕೊಳ್ಳುವಂತೆ ಮಾಡುತ್ತಿದ್ದಾನೆ. ಬೀದಿ ಬದಿಗಳಲ್ಲಿರುವ ಪಾರ್ಕಿಂಗ್ ಸ್ಪೇಸ್‌ಗಳಲ್ಲಿ ಈ ಪ್ಯಾಂಟುಗಳನ್ನು ಇಟ್ಟಿರುವ ಚಿತ್ರಗಳನ್ನು ಅಡಮ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ʼಲಾಕ್ ಡೌನ್ʼ ಅವಧಿಯಲ್ಲಿ ವಿದ್ಯಾರ್ಥಿಯಿಂದ ಸಿದ್ದವಾಯ್ತು ಎಲೆಕ್ಟ್ರಿಕ್ ಬೈಕ್
ಹೀಗೆ ಮಾಡುವ ಮೂಲಕ ತನ್ನ ಕಾರಿಗೆ ಪಾರ್ಕಿಂಗ್ ಜಾಗವನ್ನು ಬುಕಿಂಗ್ ಮಾಡಿಕೊಳ್ಳುತ್ತಿದ್ದಾನೆ ಎಂಬ ದೂರುಗಳನ್ನು ಕೇಳಿದ ಬಳಿಕ ಅಡಮ್ ನೋ ಪಾರ್ಕಿಂಗ್ ಜಾಗದಲ್ಲಿ ತಮ್ಮ ಪ್ಯಾಂಟುಗಳನ್ನು ಹೀಗೆ ನಿಲ್ಲಿಸಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಬರೀ ಪ್ಯಾಂಟುಗಳು ಯಾಕೆ ಹಾಗೇ ಟೀಶರ್ಟ್‌ಗಳನ್ನೂ ಫ್ರೀಜ್ ಮಾಡಿ ಅವುಗಳ ಮೇಲೆ ಹಾಕಲು ನೆಟ್ಟಿಗರು ಆಡಮ್‌ಗೆ ಸಲಹೆಗಳನ್ನು ಕೊಡುತ್ತಿದ್ದಾರೆ.
