ಗುಜರಿ ಸೇರಿದ್ದ ವಿಮಾನವೊಂದು ತನ್ನ ಕೊನೆಯ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ವಿಡಿಯೋ ವೈರಲ್ ಆಗೋಕೆ ಕಾರಣ ವಿಮಾನದ ಹಾರಾಟವಲ್ಲ ಬದಲಾಗಿ ಎಸ್ಕವೇಟರ್ ಚಾಲಕನ ಚಾಕಚಕ್ಯತೆ.
ವಿಮಾನಯಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ಫ್ಲೋರಿಡಾದ ಮಿಯಾಮಿಯ ಓಪಾ ಲೋಕಾ ವಿಮಾನ ನಿಲ್ದಾಣದಲ್ಲಿರುವ ಬೋಯಿಂಗ್ 707 ವಿಮಾನ ತನ್ನ ಹಾರಾಟವನ್ನ ನಿಲ್ಲಿಸಿದ ಬಳಿಕ ಜೆಸಿಬಿ ಮಾಲೀಕ ಎಸ್ಕವೇಟರ್ ಕೊಕ್ಕೆಯಿಂದ ವಿಮಾನವನ್ನ ಹಿಡಿದು ಅದಕ್ಕೆ ರೌಂಡ್ಸ್ ಹೊಡೆಸಿದ್ದಾನೆ.
ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದ ಬಹುತೇಕ ಎಲ್ಲಾ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://www.instagram.com/p/CJHsUKKh0ck/?utm_source=ig_web_copy_link