alex Certify OMG: ಸಂದರ್ಶನದಲ್ಲಾದ ಮುಖಭಂಗದಿಂದ ಮುಖ ಚಹರೆಯನ್ನೇ ಬದಲಿಸಿಕೊಂಡ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಸಂದರ್ಶನದಲ್ಲಾದ ಮುಖಭಂಗದಿಂದ ಮುಖ ಚಹರೆಯನ್ನೇ ಬದಲಿಸಿಕೊಂಡ ಯುವಕ

ಸಂದರ್ಶನದ ವೇಳೆ ತನ್ನ ರೂಪವನ್ನ ನೋಡಿ ನಕ್ಕಿದರು ಎಂಬ ಕಾರಣಕ್ಕೆ ಇದನ್ನೇ ಸವಾಲಾಗಿ ತೆಗೆದುಕೊಂಡ ವಿಯೆಟ್ನಾಂನ 25 ವರ್ಷದ ವ್ಯಕ್ತಿ ತಾನು ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ. Đỗ Quyền ಎಂಬ ಹೆಸರಿನ ವ್ಯಕ್ತಿ ಈವರೆಗೆ 9 ಕಾಸ್ಮೆಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರಂತೆ. ಟಿಕ್​ಟಾಕ್​​ನಲ್ಲಿ ತಮ್ಮ ಹಳೆಯ ಮುಖ ಹಾಗೂ ಸರ್ಜರಿ ಬಳಿಕದ ರೂಪವನ್ನ ಶೇರ್​ ಮಾಡಿದ್ದಾರೆ.

Đỗ Quyền ತಮ್ಮ ಮುಖಚರ್ಯೆ ಮಾರ್ಪಾಡು ಮಾಡಿಕೊಂಡ ಫೋಟೋವನ್ನ ಕಂಡ ನೆಟ್ಟಿಗರು ಶಾಕ್​ ಆಗಿದ್ದಾರೆ. ಕಣ್ಣು, ಮೂಗು, ಬಾಯಿ, ಬಣ್ಣ ಹೀಗೆ ಪ್ರತಿಯೊಂದೂ ಬದಲಾವಣೆಯಾಗಿದ್ದು ಗುರುತೇ ಸಿಗದಷ್ಟರ ಮಟ್ಟಿಗೆ Đỗ Quyền ಚೇಂಜ್​ ಆಗಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ Đỗ Quyền ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಸಂದರ್ಶನ ನಡೆಸುತ್ತಿದ್ದವರು ನಕ್ಕಿದ್ದರಂತೆ. ಇದರಿಂದಾಗಿ Đỗ Quyền ಈ ನಿರ್ಧಾರಕ್ಕೆ ಬಂದಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಿಕೊಂಡ ಖುಷಿಯಲ್ಲಿ ಹೆಪ್ಪುಗಟ್ಟಿದ ಕೆರೆ ಮೇಲೆ ಸ್ಟೆಪ್ ಹಾಕಿದ ಸರ್ದಾರ್ಜಿ

Đỗ Quyền ಪ್ರಸ್ತುತ ಮೇಕಪ್​ ಕಲಾವಿದನಾಗಿ ಕೆಲಸ ಮಾಡ್ತಿದ್ದಾರೆ. ಪ್ಲಾಸ್ಟಿಕ್​ ಸರ್ಜರಿಗಾಗಿ Đỗ Quyền ಈವರೆಗೆ 12.7 ಲಕ್ಷ ರೂಪಾಯಿ ವ್ಯಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...