ಸಂದರ್ಶನದ ವೇಳೆ ತನ್ನ ರೂಪವನ್ನ ನೋಡಿ ನಕ್ಕಿದರು ಎಂಬ ಕಾರಣಕ್ಕೆ ಇದನ್ನೇ ಸವಾಲಾಗಿ ತೆಗೆದುಕೊಂಡ ವಿಯೆಟ್ನಾಂನ 25 ವರ್ಷದ ವ್ಯಕ್ತಿ ತಾನು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ. Đỗ Quyền ಎಂಬ ಹೆಸರಿನ ವ್ಯಕ್ತಿ ಈವರೆಗೆ 9 ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಂತೆ. ಟಿಕ್ಟಾಕ್ನಲ್ಲಿ ತಮ್ಮ ಹಳೆಯ ಮುಖ ಹಾಗೂ ಸರ್ಜರಿ ಬಳಿಕದ ರೂಪವನ್ನ ಶೇರ್ ಮಾಡಿದ್ದಾರೆ.
Đỗ Quyền ತಮ್ಮ ಮುಖಚರ್ಯೆ ಮಾರ್ಪಾಡು ಮಾಡಿಕೊಂಡ ಫೋಟೋವನ್ನ ಕಂಡ ನೆಟ್ಟಿಗರು ಶಾಕ್ ಆಗಿದ್ದಾರೆ. ಕಣ್ಣು, ಮೂಗು, ಬಾಯಿ, ಬಣ್ಣ ಹೀಗೆ ಪ್ರತಿಯೊಂದೂ ಬದಲಾವಣೆಯಾಗಿದ್ದು ಗುರುತೇ ಸಿಗದಷ್ಟರ ಮಟ್ಟಿಗೆ Đỗ Quyền ಚೇಂಜ್ ಆಗಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ Đỗ Quyền ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಸಂದರ್ಶನ ನಡೆಸುತ್ತಿದ್ದವರು ನಕ್ಕಿದ್ದರಂತೆ. ಇದರಿಂದಾಗಿ Đỗ Quyền ಈ ನಿರ್ಧಾರಕ್ಕೆ ಬಂದಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಂಡ ಖುಷಿಯಲ್ಲಿ ಹೆಪ್ಪುಗಟ್ಟಿದ ಕೆರೆ ಮೇಲೆ ಸ್ಟೆಪ್ ಹಾಕಿದ ಸರ್ದಾರ್ಜಿ
Đỗ Quyền ಪ್ರಸ್ತುತ ಮೇಕಪ್ ಕಲಾವಿದನಾಗಿ ಕೆಲಸ ಮಾಡ್ತಿದ್ದಾರೆ. ಪ್ಲಾಸ್ಟಿಕ್ ಸರ್ಜರಿಗಾಗಿ Đỗ Quyền ಈವರೆಗೆ 12.7 ಲಕ್ಷ ರೂಪಾಯಿ ವ್ಯಯಿಸಿದ್ದಾರೆ.