alex Certify ಎರಡೆರಡು ಕೆಲಸ ಮಾಡುತ್ತೆ ಈ ಯಂತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡೆರಡು ಕೆಲಸ ಮಾಡುತ್ತೆ ಈ ಯಂತ್ರ…!

ಕೆಲವರು ತಮ್ಮ ಕ್ರಿಯಾಶೀಲತೆಯಿಂದ ಇದ್ದ ವಸ್ತುಗಳನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಅಂಥವರಲ್ಲಿ ಅಮೆರಿಕಾದ ಮ್ಯಾಟ್ ಬೆಂಡೆಟೊ ಎಂಬುವವರೂ ಒಬ್ಬರು‌. ಅವರು ಮನೆಯ ಲಾನ್ ಕಟ್ ಮಾಡುವ ಯಂತ್ರ ಲಾನ್ ಮೂವರ್ ಅನ್ನು ಬಾರ್ ಅಟೆಂಡರ್ ಆಗಿ ಪರಿವರ್ತಿಸಿದ್ದಾರೆ.

ಮನೆಯ ಲಾನ್ ಕಟ್ ಮಾಡುವ ಲ್ಯಾಂಡ್ ರೊಯ್ಡ್ ಎಂಬ ಕಂಪನಿಯ ಯಂತ್ರಕ್ಕೆ ಸಣ್ಣ ಬದಲಾವಣೆಗಳನ್ನು ಮಾಡಿ ಅದು ತಮಗೆ ಬಿಯರ್‌ ಕ್ಯಾನ್ ಗಳನ್ನು ತಂದುಕೊಡುವಂತೆ ಮಾಡಿದ್ದಾರೆ. ಯಂತ್ರಕ್ಕೆ ಒಂದು ಸ್ಟೂಲ್ ಅಳವಡಿಸಿ ಅದಕ್ಕೆ ಗ್ಲಾಸ್ ಬಾಕ್ಸ್ ಹಾಕಿ ಕೆಲ ಬಿಯರ್ ಇರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.‌

ಯಂತ್ರಕ್ಕೆ ಮೂವ್ ಟೆಂಡರ್ ಎಂದು ಹೆಸರಿಟ್ಟಿದ್ದು, ಅದು ಹುಲ್ಲು ಕಟ್ ಮಾಡುವ ಜತೆ ಬಿಯರನ್ನು ಕುಳಿತಲ್ಲಿಗೇ ತಂದು ಕೊಡುತ್ತದೆ.‌ ಯಂತ್ರಕ್ಕೆ ಕೆಲ ಬದಲಾವಣೆ ಮಾಡಿ‌ ಸಿದ್ಧ ಮಾಡಿದ ವಿಡಿಯೋವನ್ನು ಬೆಂಡೆಟೊ ಯೂಟ್ಯೂಬ್ ನಲ್ಲಿ ಹಾಕಿದ್ದು, ಜನರಿಂದ ಸಾಕಷ್ಟು‌ ಮೆಚ್ಚುಗೆ ಬಂದಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...