alex Certify ಹುಟ್ಟುಹಬ್ಬದ ದಿನದಂದು ನಡೀತು ಅಂತ್ಯಕ್ರಿಯೆ ಪಾರ್ಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ದಿನದಂದು ನಡೀತು ಅಂತ್ಯಕ್ರಿಯೆ ಪಾರ್ಟಿ..!

ಜನ್ಮದಿನದ ಪಾರ್ಟಿ ಅಂದರೆ ಅಲ್ಲಿ ಕೇಕ್, ಬಲೂನ್​ಗಳು, ಆತ್ಮೀಯರು ಇರೋದು ಸಹಜ, ಆದರೆ ನಿಮ್ಮ ಬರ್ತಡೇ ದಿನ ನಿಮ್ಮ ಆತ್ಮೀಯರು ನಿಮ್ಮನ್ನ ನೆನೆದು ಶೋಕಿಸುತ್ತಾ ಕೂರೋದು ಅಂದ್ರೆ ವಿಚಿತ್ರ ಅನಿಸುತ್ತೆ ಅಲ್ವಾ? ಆದರೆ ಎಲಿ ಮೆಕ್ಕನ್​ ತಮ್ಮ 33ನೇ ಜನ್ಮದಿನದಂದು ಇಂತಹದ್ದೊಂದು ಘಟನೆಗೆ ಸಾಕ್ಷಿಯಾಗಿದ್ದಾರೆ.

2017ರಲ್ಲಿ ಎಲಿ ಅವರ ಸಂಗಾತಿ ಅವರ ಜನ್ಮದಿನದಂದು ಅಂತ್ಯಕ್ರಿಯೆ ಪಾರ್ಟಿ ಮಾಡಿದ್ದಾರೆ. ಜನರು ನಮ್ಮನ್ನ ಎಷ್ಟು ಪ್ರೀತಿ ಮಾಡ್ತಾರೆ ಅಂತಾ ಗೊತ್ತಾಗೋಕೆ ನಾವು ಸಾಯಲೇಬೇಕು ಅಂತಾ ಇಲ್ಲ ಎಂಬುದನ್ನ ತೋರಿಸೋಕೆ ಈ ರೀತಿಯ ಪ್ಲಾನ್​ ಮಾಡಿದ್ದರಂತೆ,

ನಾವೀಗ ಬರ್ತಡೇ ಸೆಲೆಬ್ರೇಷನ್​ಗೆ ಹೋಗುತ್ತಿದ್ದೇವೆ. ಚೆನ್ನಾಗಿ ರೆಡಿಯಾಗಿ ಅಂತಾ ಎಲಿ ಅವರ ಪತಿ ಹೇಳಿದ್ದಾರೆ. ಅದರಂತೆ ಎಲಿ ಕೂಡ ತಮ್ಮ ಬರ್ತಡೇಗೆ ರೆಡಿಯಾಗಿದ್ದಾರೆ. ಸ್ನೇಹಿತರ ಮನೆಯಲ್ಲಿ ಬರ್ತಡೇ ಪಾರ್ಟಿ ಆಯೋಜಿಸಿದ್ದರಿಂದ ಎಲಿ ತಮ್ಮ ಸಂಗಾತಿ ಜೊತೆ ಅಲ್ಲಿಗೆ ಪಯಣ ಬೆಳೆಸಿದ್ದರು. ಆದರೆ ಅಲ್ಲಿ ಕಿಟಕಿಗಳನ್ನ ಕಪ್ಪು ಪರದೆಗಳಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ಬಲೂನ್​ಗಳ ಜಾಗದಲ್ಲಿ ಕಪ್ಪು ಬಲೂನ್​ನನ್ನ ಹಾಕಲಾಗಿತ್ತು. ದಿಂಬುಗಳನ್ನ ಬಳಸಿ ನಕಲಿ ಶವದ ಬಾಕ್ಸ್​ಗಳನ್ನ ತಯಾರಿಸಲಾಗಿತ್ತು. ಸ್ನೇಹಿತರು ಕಪ್ಪು ಬಟ್ಟೆಯನ್ನ ಧರಿಸಿ ಅಳುವಂತೆ ನಟನೆ ಮಾಡಲು ಆರಂಭಿಸಿದ್ರು. ಅಲ್ಲದೇ ಎಲಿ ಅವರು ಆ ಜಾಗದಲ್ಲೇ ಇಲ್ಲ ಎಂಬ ರೀತಿಯಲ್ಲಿ ಅತಿಥಿಗಳು ನಟಿಸಿದ್ದಾರೆ.

ತನ್ನ ಸಂಗಾತಿಯ ಈ ಪ್ಲಾನ್​ನ್ನ ನೋಡಿ ಎಲಿ ಮಂತ್ರಮುಗ್ಧರಾಗಿದ್ದಾರೆ. 2017ರ ಫೋಟೋಗಳನ್ನ ಶೇರ್​ ಮಾಡುವ ಮೂಲಕ ತನ್ನ ಅನುಭವವನ್ನ ಹಂಚಿಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...