
ನಿಯಾಲ್ ಗ್ರೇ ಈ ವಿಡಿಯೋವನ್ನ ಪೋಸ್ಟ್ ಮಾಡಿ, ನಾನು ಕಳೆದ 10 ವರ್ಷಗಳಿಂದ ನಿತ್ಯ ನನ್ನ ಸೆಲ್ಫಿಯನ್ನ ತೆಗೆದುಕೊಳ್ತಿದ್ದೆ. ಇದು 14 ರಿಂದ 24 ವಯಸ್ಸಿನ ನಾನು ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೋದಲ್ಲಿ ನಿಯಾಲ್ 14 ರಿಂದ 24 ವರ್ಷಕ್ಕೆ ಬೆಳೆಯುತ್ತಿರುವ ವೇಳೆ ಆತನ ಮುಖ ಚರ್ಯೆಯಲ್ಲಾದ ಬದಲಾವಣೆಗಳನ್ನ ಗಮನಿಸಬಹುದಾಗಿದೆ.
ಈ ವಿಡಿಯೋ 1.4 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಹೆಚ್ಚಿನ ನೆಟ್ಟಿಗರು ಈ ಯುವಕನ ಹೇರ್ಸ್ಟೈಲ್ನಲ್ಲಾದ ಬದಲಾವಣೆಗಳ ಬಗ್ಗೆ ಮಾತನಾಡಿದ್ರೆ, ಇನ್ನೂ ಹಲವರು 10 ವರ್ಷಗಳ ಕಾಲ ಪ್ರತಿದಿನ ಫೋಟೋ ತೆಗೆದುಕೊಳ್ತಿದ್ದ ಬದ್ಧತೆಯನ್ನ ಪ್ರಶಂಸಿಸಿದ್ದಾರೆ.