ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ.
ವರ್ಜೀನಿಯಾದ 32ರ ಹರೆಯದ ಬೆನ್ ಕಟ್ಜ್‌ಮನ್ ಹೆಸರಿನ ಈ ವ್ಯಕ್ತಿ ಒಟ್ಟಾರೆ 8.6 ಕಿಮೀ ದೂರವನ್ನು ಹಲವು ಲ್ಯಾಪ್‌ಗಳಲ್ಲಿ ಈಜಿದ್ದಾರೆ. ಕಿಂಗ್ ಜಾರ್ಜ್ ವೈಎಂಸಿಎ ಈಜುಕೊಳದ ಉದ್ದವನ್ನು ಬೆನ್ 344 ಬಾರಿ ಪ್ರದಕ್ಷಿಣೆ ಹಾಕಿದ್ದಾರೆ.
ಬೆನ್‌ರ ಈ ಯತ್ನದ ಸಂಪೂರ್ಣ ವಿಡಿಯೋವನ್ನು ಗಿನ್ನೆಸ್ ದಾಖಲೆ ಸಂಸ್ಥೆಗೆ ಕೊಡಲಾಗಿದ್ದು, ಅಧಿಕೃತ ಮನ್ನಣೆಗೆ ಕೋರಲಾಗಿದೆ.
ಮನ ಕಲಕುತ್ತೆ ‘ಸೆಕ್ಸ್ ವರ್ಕರ್ಸ್’ ಗಳ ಕರುಣಾಜನಕ ಕಥೆ
ಈ ಹಿಂದೆ ಕೈಕೋಳ ಹಾಕಿಕೊಂಡು 5.49 ಕಿಮೀ ಈಜಿದ್ದ ಎಲ್ಹಾಮ್ ಸದತ್ ಅಸ್ಗಾರಿ ಹೆಸರಿನ ವ್ಯಕ್ತಿಯ ಹೆಸರಲ್ಲಿ ಗಿನ್ನೆಸ್ ದಾಖಲೆ ಇತ್ತು.
ತನ್ನ ಮೂರನೇ ವಯಸ್ಸಿನಿಂದ ಈಜಿನ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಬೆನ್ ಈ ಶಿಸ್ತಿನಲ್ಲಿ ಪಾರಂಗತರಾಗಿದ್ದಾರೆ. ಡಬಲ್ ಆರ್ಮ್ ಪುಲ್ ಹಾಗೂ ಸೈಡ್‌ಸ್ಟ್ರೋಕ್‌ಗಳ ಮೂಲಕ ಈ ಹುಬ್ಬೇರಿಸುವ ಸಾಧನೆಗೈದಿದ್ದಾರೆ ಬೆನ್.