ಚಾಲಕನಿಲ್ಲದೇ ಸಂಚರಿಸಿದ ಕಾರು: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ 13-05-2021 7:34AM IST / No Comments / Posted In: Featured News, International ನೂತನ ತಂತ್ರಜ್ಞಾನಗಳ ಮೂಲಕವೇ ಟೆಸ್ಲಾ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಲೇ ಇರುತ್ತವೆ. ಆಟೋಪೈಲಟ್ ಅಥವಾ ರಿಮೋಟ್ ಡ್ರೈವಿಂಗ್ ಸೌಲಭ್ಯಗಳಿಂದಾಗಿ ಟೆಸ್ಲಾ ಗ್ರಾಹಕರನ್ನ ಹೆಚ್ಚಾಗಿಯೇ ಸೆಳೆಯುತ್ತಿದೆ. ಇದೇ ಕಾರಣಕ್ಕಾಗಿಯೇ ಟೆಸ್ಲಾ ಕಾರುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಕ್ರಿಯೇಟ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಟೆಸ್ಲಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ ಚಾಲಕನ ಸೀಟಿನಲ್ಲಿ ಯಾರೂ ಇಲ್ಲದೇ ಇದ್ದರೂ ಸಹ ಕಾರು ಸಂಚರಿಸುತ್ತಿದೆ. ಕ್ಯಾಲಿಫೋರ್ನಿಯಾ ಹೆದ್ದಾರಿ ಗಸ್ತು ನಿಗಮ ಈ ವಿಡಿಯೋವನ್ನ ಪೋಸ್ಟ್ ಮಾಡಿದೆ. ಕಿರುಕುಳ ನೀಡಿ ತಾಯಿ ಹತ್ಯೆ ಮಾಡಿದ ಪಾಪಿ ಪುತ್ರ ಚಾಲಕ ರಹಿತ ಕಾರುಗಳನ್ನ ಟೆಸ್ಲಾ ಕಂಪನಿ ಅಭಿವೃದ್ಧಿ ಪಡಿಸಿದ್ರೂ ಸಹ ಚಾಲಕನ ಸೀಟಿನಲ್ಲಿ ಒಬ್ಬರು ಕುಳಿತುಕೊಳ್ಳಲೇಬೇಕು. ಸುರಕ್ಷತಾ ದೃಷ್ಟಿಯಿಂದಾಗಿ ಕಾರು ತನ್ನಿಂದ ತಾನೇ ಚಲಿಸುತ್ತಾ ಇದ್ದರೂ ಸಹ ಈ ಸೀಟಿನಲ್ಲಿ ಒಬ್ಬರು ಕುಳಿತುಕೊಳ್ಳೋದು ಅನಿವಾರ್ಯವಾಗಿದೆ. ಯಾರದಾರೂ ಒಬ್ಬರು ಚಾಲಕರ ಸೀಟಿನಲ್ಲಿ ಕುಳಿತಿದ್ದಾಗ ಮಾತ್ರ ಈ ರೀತಿ ಆಟೋಪೈಲಟ್ ಸೌಲಭ್ಯ ಬಳಕೆ ಮಾಡಿ ಎಂದು ಟೆಸ್ಲಾ ಕಂಪನಿಯೇ ಹೇಳಿದೆ. ಆಟೋ ಪೈಲಟ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಬೇಕು ಅಂದರೆ ನುರಿತ ಚಾಲಕ ಸೀಟಿನಲ್ಲಿ ಕುಳಿತುಕೊಳ್ಳೋದು ಅನಿವಾರ್ಯ ಎಂದು ಕಂಪನಿ ಹೇಳಿದೆ. ಆದರೆ ಈ ಕಾರಿನಲ್ಲಿ ಯಾವೊಬ್ಬ ವ್ಯಕ್ತಿಯು ಚಾಲಕನ ಸೀಟಿನಲ್ಲಿ ಕುಳಿತುಕೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದ್ದು ಕ್ಯಾಲಿಫೋರ್ನಿಯಾ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.