ದಿನನಿತ್ಯದ ಜೀವನದಲ್ಲಿ ಮಾಡಬಹುದಾದ ಎಲ್ಲ ರೀತಿಯ ಕೆಲಸದಲ್ಲೂ ಸಹ ವಿಶ್ವ ದಾಖಲೆ ಮಾಡಬಹುದು. ಇತ್ತೀಚಿನ ನಿದರ್ಶನವೊಂದರಲ್ಲಿ, ದೊಡ್ಡ ಗುಳ್ಳೆಯೊಂದರ ಒಳಗೆ ನೂರಾರು ಸಣ್ಣ ಗುಳ್ಳೆಗಳನ್ನು ಊದಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
ಚಾಂಗ್ ಯು-ಟೇ ಹೆಸರಿನ ಈ ವ್ಯಕ್ತಿ ದೊಡ್ಡ ಗುಳ್ಳೆಯ ಒಳಗೆ 783 ಗುಳ್ಳೆಗಳನ್ನು ಬಿಟ್ಟಿದ್ದಾರೆ. ಇದೇ ವ್ಯಕ್ತಿ ಈ ಹಿಂದೆ ಸೋಪಿನ ಗುಳ್ಳೆಯೊಂದನ್ನು 290 ಬಾರಿ ಬೌನ್ಸ್ ಆಗುವಂತೆ ಮಾಡುವ ಮೂಲಕ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ.
ನಾಲ್ಕು ನಿಮಿಷಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೇಲ್ಕಂಡ ಎರಡೂ ದಾಖಲೆಗಳನ್ನು ನಿರ್ಮಿಸಿದ ಘಟನೆಗಳನ್ನು ನೋಡಬಹುದಾಗಿದೆ.
https://www.facebook.com/watch/?v=466984760958377&t=5