alex Certify ಬರೋಬ್ಬರಿ 53 ವರ್ಷಗಳ ಬಳಿಕ ಮಾಲೀಕನ ಕೈಗೆ ಸಿಕ್ಕ ಪರ್ಸ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 53 ವರ್ಷಗಳ ಬಳಿಕ ಮಾಲೀಕನ ಕೈಗೆ ಸಿಕ್ಕ ಪರ್ಸ್..​..!

53 ವರ್ಷದ ಹಿಂದೆ ಕಳೆದು ಹೋಗಿದ್ದ ಪರ್ಸ್​ ಮಾಲೀಕನಿಗೆ ವಾಪಸ್​ ಸಿಕ್ಕಿದ ಆಶ್ಚರ್ಯಕರ ಘಟನೆ ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋದಲ್ಲಿ ನಡೆದಿದೆ.

ಪರ್ಸ್​ ಮಾಲೀಕ 53 ವರ್ಷಗಳ ಹಿಂದೆ ಅಂಟಾರ್ಟಿಕಾದಲ್ಲಿ ತನ್ನ ಪರ್ಸ್​ನ್ನು ಕಳೆದುಕೊಂಡಿದ್ದ.

ಅಂಟಾರ್ಟಿಕಾದಲ್ಲಿ ನೌಕಾಪಡೆಯ ಹವಾಮಾನ ಶಾಸ್ತ್ರಜ್ಞನಾಗಿ ನೇವೆ ಸಲ್ಲಿಸುತ್ತಿದ್ದ ಪಾಲ್​ ಗ್ರೀಶಂ 1967ರ ಅಕ್ಟೋಬರ್​ ತಿಂಗಳಲ್ಲಿ ಪರ್ಸ್​ನ್ನು ಕಳೆದುಕೊಂಡಿದ್ದಾರೆ. ಆದರೆ ತಾನು ಪರ್ಸ್ ಕಳೆದುಕೊಂಡಿದ್ದೇನೆ ಎಂಬ ವಿಚಾರವೂ 91 ವರ್ಷದ ಪಾಲ್​ಗೆ ನೆನಪಿರಲಿಲ್ಲ, ಆದರೆ ಮೆಕ್​ ಮುರ್ಡೋ ನಿಲ್ದಾಣದಲ್ಲಿ ಕಟ್ಟಡ ನೆಲಸಮ ಮಾಡುತ್ತಿದ್ದ ವೇಳೆ ಲಾಕರ್​ನಲ್ಲಿ ಈ ಪರ್ಸ್ ಕಂಡು ಬಂದಿದೆ.

ಪರ್ಸ್​ನಲ್ಲಿ ಗ್ರಿಶಂರ ನೌಕಾಪಡೆ ಐಡಿ, ಅವರ ವಾಹನ ಪರವಾನಗಿ, ತೆರಿಗೆ ಪತ್ರ, ತಿಂಡಿಯೊಂದನ್ನ ತಯಾರಿಸುವ ವಿಧಾನ ಬರೆದಿದ್ದ ಚೀಟಿ ಹಾಗೂ ಇನ್ನು ಕೆಲ ವಸ್ತುಗಳು ಇದ್ದವು. ನೌಕಾಪಡೆಯಲ್ಲಿ ಖರೀದಿ ಮಾಡೋಕೆ ಏನು ಇಲ್ಲವಾದ್ದರಿಂದ ಆ ಪರ್ಸ್​ನಲ್ಲಿ ಹಣವಿರಲಿಲ್ಲ.

ಈ ಹಿಂದೆ ಅಂಟಾರ್ಟಿಕಾದಲ್ಲಿ ಸ್ನೋ ಕ್ಯಾಪ್​ ಸಂಶೋಧನಾ ಏಜನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನ್ಯೂ ಹ್ಯಾಂಪ್​ಶೈರ್​​ನ ಸ್ಟೀಫನ್​ ಡೆಕಾಟೋ, ಮೆಕ್​ಮುರ್ಡೋ ಸ್ಟೇಷನ್​ ಕಟ್ಟಡ ಉರುಳುವಿಕೆ ಸಮಯದಲ್ಲಿ ಈ ಪರ್ಸ್​ನ್ನು ಕಂಡಿದ್ದು ಸಾಕಷ್ಟು ಪ್ರಯತ್ನದ ಬಳಿಕ ಮಾಲೀಕ ಗ್ರಿಶಂಗೆ ಹಿಂದಿರುಗಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...