ಬರೋಬ್ಬರಿ 53 ವರ್ಷಗಳ ಬಳಿಕ ಮಾಲೀಕನ ಕೈಗೆ ಸಿಕ್ಕ ಪರ್ಸ್....! 05-02-2021 3:18PM IST / No Comments / Posted In: Latest News, International 53 ವರ್ಷದ ಹಿಂದೆ ಕಳೆದು ಹೋಗಿದ್ದ ಪರ್ಸ್ ಮಾಲೀಕನಿಗೆ ವಾಪಸ್ ಸಿಕ್ಕಿದ ಆಶ್ಚರ್ಯಕರ ಘಟನೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ನಡೆದಿದೆ. ಪರ್ಸ್ ಮಾಲೀಕ 53 ವರ್ಷಗಳ ಹಿಂದೆ ಅಂಟಾರ್ಟಿಕಾದಲ್ಲಿ ತನ್ನ ಪರ್ಸ್ನ್ನು ಕಳೆದುಕೊಂಡಿದ್ದ. ಅಂಟಾರ್ಟಿಕಾದಲ್ಲಿ ನೌಕಾಪಡೆಯ ಹವಾಮಾನ ಶಾಸ್ತ್ರಜ್ಞನಾಗಿ ನೇವೆ ಸಲ್ಲಿಸುತ್ತಿದ್ದ ಪಾಲ್ ಗ್ರೀಶಂ 1967ರ ಅಕ್ಟೋಬರ್ ತಿಂಗಳಲ್ಲಿ ಪರ್ಸ್ನ್ನು ಕಳೆದುಕೊಂಡಿದ್ದಾರೆ. ಆದರೆ ತಾನು ಪರ್ಸ್ ಕಳೆದುಕೊಂಡಿದ್ದೇನೆ ಎಂಬ ವಿಚಾರವೂ 91 ವರ್ಷದ ಪಾಲ್ಗೆ ನೆನಪಿರಲಿಲ್ಲ, ಆದರೆ ಮೆಕ್ ಮುರ್ಡೋ ನಿಲ್ದಾಣದಲ್ಲಿ ಕಟ್ಟಡ ನೆಲಸಮ ಮಾಡುತ್ತಿದ್ದ ವೇಳೆ ಲಾಕರ್ನಲ್ಲಿ ಈ ಪರ್ಸ್ ಕಂಡು ಬಂದಿದೆ. ಪರ್ಸ್ನಲ್ಲಿ ಗ್ರಿಶಂರ ನೌಕಾಪಡೆ ಐಡಿ, ಅವರ ವಾಹನ ಪರವಾನಗಿ, ತೆರಿಗೆ ಪತ್ರ, ತಿಂಡಿಯೊಂದನ್ನ ತಯಾರಿಸುವ ವಿಧಾನ ಬರೆದಿದ್ದ ಚೀಟಿ ಹಾಗೂ ಇನ್ನು ಕೆಲ ವಸ್ತುಗಳು ಇದ್ದವು. ನೌಕಾಪಡೆಯಲ್ಲಿ ಖರೀದಿ ಮಾಡೋಕೆ ಏನು ಇಲ್ಲವಾದ್ದರಿಂದ ಆ ಪರ್ಸ್ನಲ್ಲಿ ಹಣವಿರಲಿಲ್ಲ. ಈ ಹಿಂದೆ ಅಂಟಾರ್ಟಿಕಾದಲ್ಲಿ ಸ್ನೋ ಕ್ಯಾಪ್ ಸಂಶೋಧನಾ ಏಜನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನ್ಯೂ ಹ್ಯಾಂಪ್ಶೈರ್ನ ಸ್ಟೀಫನ್ ಡೆಕಾಟೋ, ಮೆಕ್ಮುರ್ಡೋ ಸ್ಟೇಷನ್ ಕಟ್ಟಡ ಉರುಳುವಿಕೆ ಸಮಯದಲ್ಲಿ ಈ ಪರ್ಸ್ನ್ನು ಕಂಡಿದ್ದು ಸಾಕಷ್ಟು ಪ್ರಯತ್ನದ ಬಳಿಕ ಮಾಲೀಕ ಗ್ರಿಶಂಗೆ ಹಿಂದಿರುಗಿಸಿದ್ದಾರೆ.