ಆಸ್ಪ್ರೇಲಿಯಾದ ಮ್ಯಾಟ್ ರೈಟ್ ಹೆಸರಿನ ಕುದುರೆ ಸಾಕುವವರೊಬ್ಬರ ಸಾಹಸಗಾಥೆ ಇದು. ಇಲ್ಲಿನ ನಾರ್ದನ್ ಟೆರಿಟರಿಯಲ್ಲಿನ ಜಲಮಾರ್ಗವೊಂದನ್ನು ತನ್ನ ಸಹೋದ್ಯೋಗಿ ಟಾಮಿ ನಿಕೋಲಾಸರ್‌ರೊಂದಿಗೆ ಸೇರಿಕೊಂಡು ಕ್ಲಿಯರ್ ಮಾಡುತ್ತಿದ್ದ ವೇಳೆ ಮೊಸಳೆಯೊಂದು ಫಾಲೋ ಮಾಡಿಕೊಂಡು ಬಂದಿದೆ.
ನಮ್ಮಲ್ಲಿ ಬಹುತೇಕರಿಗೆ ಈ ರೀತಿ ಆಗಿದ್ದರೆ ಗಾಬರಿಯಾಗಿ ಬೆಚ್ಚಿಬೀಳುತ್ತಿದ್ದೆವು. ಆದರೆ ಈ ಸಂದರ್ಭದಲ್ಲೂ ಸಮಚಿತ್ತತೆ ಕಾಪಾಡಿಕೊಂಡಿದ್ದ ರೈಟ್, ತಮ್ಮ ಕ್ಯಾಮೆರಾದಲ್ಲಿ ಮೊಸಳೆಯೊಂದಿಗೆ ತಮ್ಮ ಕಾದಾಟದ ವಿಡಿಯೋ ಮಾಡಿಕೊಂಡಿದ್ದಾರೆ.
ಮೊಸಳೆಯ ಮೂತಿಯನ್ನು ಹಿಡಿದುಕೊಂಡು, ಅದನ್ನು ಹಿಂದಕ್ಕೆ ತಳ್ಳಿದ ರೈಟ್, “ನಾವಿಲ್ಲಿ ಕೆಲವು ಹಲಗೆಗಳನ್ನು ನೀರಿನಿಂದ ಹೊರತೆಗೆಯಲು ನೋಡುತ್ತಿದ್ದೇವೆ. ಈ ಹಲಗೆಗಳನ್ನು ಮೇಲೆತ್ತಿ ಇಡಬೇಕಿದೆ. ನಮಗೆ ಇದು ಬಹಳ ಕಠಿಣ ಸಮಯವಾಗಿದೆ. ಈ ವೇಳೆ ನಮ್ಮನ್ನು ಭೇಟಿ ಮಾಡಲು ಪುಟ್ಟ ಸ್ನೇಹಿತನೊಬ್ಬ ಬಂದಿದ್ದಾನೆ. ಆತ ನಮ್ಮನ್ನು ಎಲ್ಲಡೆ ಫಾಲೋ ಮಾಡುತ್ತಿದ್ದು, ಕೆಲಸ ಮಾಡಲು ಬಿಡುತ್ತಿಲ್ಲ” ಎಂದು ವಿಡಿಯೋದಲ್ಲಿ ರೈಟ್ ಹೇಳುತ್ತಿರುವುನ್ನು ಕೇಳಿಸಿಕೊಳ್ಳಬಹುದಾಗಿದೆ.
https://www.instagram.com/tv/CFIUdwvnbnF/?utm_source=ig_embed