alex Certify ಮೊಸಳೆ ಮೂತಿ ಹಿಡಿದು ಹಿಂದಕ್ಕೆ ತಳ್ಳಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆ ಮೂತಿ ಹಿಡಿದು ಹಿಂದಕ್ಕೆ ತಳ್ಳಿದ ಭೂಪ…!

ಆಸ್ಪ್ರೇಲಿಯಾದ ಮ್ಯಾಟ್‌ ರೈಟ್ ಹೆಸರಿನ ಕುದುರೆ ಸಾಕುವವರೊಬ್ಬರ ಸಾಹಸಗಾಥೆ ಇದು. ಇಲ್ಲಿನ ನಾರ್ದನ್ ಟೆರಿಟರಿಯಲ್ಲಿನ ಜಲಮಾರ್ಗವೊಂದನ್ನು ತನ್ನ ಸಹೋದ್ಯೋಗಿ ಟಾಮಿ ನಿಕೋಲಾಸರ್‌ರೊಂದಿಗೆ ಸೇರಿಕೊಂಡು ಕ್ಲಿಯರ್‌ ಮಾಡುತ್ತಿದ್ದ ವೇಳೆ ಮೊಸಳೆಯೊಂದು ಫಾಲೋ ಮಾಡಿಕೊಂಡು ಬಂದಿದೆ.

ನಮ್ಮಲ್ಲಿ ಬಹುತೇಕರಿಗೆ ಈ ರೀತಿ ಆಗಿದ್ದರೆ ಗಾಬರಿಯಾಗಿ ಬೆಚ್ಚಿಬೀಳುತ್ತಿದ್ದೆವು. ಆದರೆ ಈ ಸಂದರ್ಭದಲ್ಲೂ ಸಮಚಿತ್ತತೆ ಕಾಪಾಡಿಕೊಂಡಿದ್ದ ರೈಟ್, ತಮ್ಮ ಕ್ಯಾಮೆರಾದಲ್ಲಿ ಮೊಸಳೆಯೊಂದಿಗೆ ತಮ್ಮ ಕಾದಾಟದ ವಿಡಿಯೋ ಮಾಡಿಕೊಂಡಿದ್ದಾರೆ.

ಮೊಸಳೆಯ ಮೂತಿಯನ್ನು ಹಿಡಿದುಕೊಂಡು, ಅದನ್ನು ಹಿಂದಕ್ಕೆ ತಳ್ಳಿದ ರೈಟ್, “ನಾವಿಲ್ಲಿ ಕೆಲವು ಹಲಗೆಗಳನ್ನು ನೀರಿನಿಂದ ಹೊರತೆಗೆಯಲು ನೋಡುತ್ತಿದ್ದೇವೆ. ಈ ಹಲಗೆಗಳನ್ನು ಮೇಲೆತ್ತಿ ಇಡಬೇಕಿದೆ. ನಮಗೆ ಇದು ಬಹಳ ಕಠಿಣ ಸಮಯವಾಗಿದೆ. ಈ ವೇಳೆ ನಮ್ಮನ್ನು ಭೇಟಿ ಮಾಡಲು ಪುಟ್ಟ ಸ್ನೇಹಿತನೊಬ್ಬ ಬಂದಿದ್ದಾನೆ. ಆತ ನಮ್ಮನ್ನು ಎಲ್ಲಡೆ ಫಾಲೋ ಮಾಡುತ್ತಿದ್ದು, ಕೆಲಸ ಮಾಡಲು ಬಿಡುತ್ತಿಲ್ಲ” ಎಂದು ವಿಡಿಯೋದಲ್ಲಿ ರೈಟ್ ಹೇಳುತ್ತಿರುವುನ್ನು ಕೇಳಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...