
ಕೈಯಲ್ಲಿ ಸೀಗಡಿಯಿಂದ ಮಾಡಿದ ಆಹಾರವನ್ನ ಹಿಡಿದುಕೊಂಡು ವ್ಯಕ್ತಿ ನಡೆದುಕೊಂಡು ಬರ್ತಿದ್ದ. ಇದೇ ವೇಳೆ ಅಲ್ಲೇ ಇದ್ದ ಬೆಳ್ಳಕ್ಕಿ ಆತನ ಬಳಿಗೆ ಬಂದಿದೆ.
ಇನ್ನೇನು ಆತನ ಕೈನಿಂದ ಆಹಾರವನ್ನ ಕಸಿದುಕೊಳ್ತು ಅನ್ನೋವಷ್ಟರಲ್ಲಿ ಅದರ ಹೊಟ್ಟೆಗೆ ಪಂಚ್ ನೀಡಿದ್ದಾನೆ. ಹಕ್ಕಿ ಅಲ್ಲಿಂದ ಹಾರಿ ಹೋಗುತ್ತಿದ್ದಂತೆಯೇ ಏನೂ ಆಗೇ ಇಲ್ಲ ಎಂಬಂತೆ ಅಲ್ಲಿಂದ ನಡೆದುಕೊಂಡು ಬಂದಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಸಂಪಾದಿಸಿದೆ.