alex Certify ಪ್ರಿಯಕರನ ಕೀಟಲೆ ಕಂಡು ಪೆಚ್ಚಾದ್ಲು ಗೆಳತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ಕೀಟಲೆ ಕಂಡು ಪೆಚ್ಚಾದ್ಲು ಗೆಳತಿ….!

ಜಾಲತಾಣದಲ್ಲಿ ಇತ್ತೀಚೆಗೆ ಕೀಟಲೆ ಮಾಡುವ ವಿಡಿಯೋಗಳು ಹೆಚ್ಚು ಸದ್ದು ಮಾಡುತ್ತಿವೆ.

ಕೆಲವರು ಇದರ ಪರ ಇದ್ದರೆ, ಇನ್ನೂ ಕೆಲವರು ಇದಕ್ಕೆ ವಿರುದ್ಧವಾಗಿಯೇ ಮಾತಾಡುವವರಿದ್ದಾರೆ. ಮತ್ತೊಬ್ಬರನ್ನು ಗೋಳಾಡಿಸಿ, ಅಳಿಸಿ ನಗಿಸುವ ಪ್ರ್ಯಾಂಕ್ ಬೇಡ ಎನ್ನುವರಿದ್ದಾರೆ.

ಅದೇನೇ ಇರಲಿ, ಪ್ರೇಯಸಿಗೆ ಕೀಟಲೆ ಕೊಟ್ಟು ಅಳಿಸಿ, ನಗಿಸಿದ ಅಂತಹುದೇ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ಹಲಗೆಯೊಂದರ ಮೇಲೆ ಉಗುರು ಕತ್ತರಿಸಿಕೊಳ್ಳುತ್ತಾ ಕುಳಿತಿರುವ ಪ್ರಿಯಕರ ಚೋರಾಗಿ ಚೀರುತ್ತಾನೆ. ಇದನ್ನು ಕೇಳಿ ಓಡಿ ಬಂದ ಪ್ರೇಯಸಿ, ಅಲ್ಲಿ ರಕ್ತ, ಬೆರಳಿಗೆ ಸಿಕ್ಕಿಹಾಕಿಕೊಂಡ ಪಿನ್, ಅರೆಬರೆ ಕತ್ತರಿಸಿಕೊಂಡಿರುವ ಉಗುರು ನೋಡಿ ಗಾಬರಿಯಾಗುತ್ತಾಳೆ.

ನಾಟಕ ಮುಂದುವರಿಸುವ ಪ್ರಿಯಕರ, ಕೈಗೆ ಅಂಟಿಕೊಂಡಿರುವ ಬೆರಳಿನ ಉಳಿದ ಭಾಗವನ್ನು ಕಿತ್ತುಬಿಡುವಂತೆ ಆಕೆಗೆ ಹೇಳುತ್ತಾನೆ. ಅದನ್ನು ಕೇಳಿ ಇನ್ನಷ್ಟು ಮೈ ಜುಂ ಎನ್ನುತ್ತದೆ. ಆತನ ನೋವು, ಆಕ್ರಂದನ ತಾಳಲಾರದೆ ನಡುಗುತ್ತಲೇ ಉಳಿದರ್ಧ ಬೆರಳು, ಉಗುರು ಕೀಳುತ್ತಾಳೆ. ನಂತರ ಅದೆಲ್ಲವೂ ಕೀಟಲೆ, ಅಲ್ಲಿದ್ದದ್ದು ಟೊಮ್ಯಾಟೊ ಕೆಚಪ್ ಎಂಬುದನ್ನು ತಿಳಿದು ಆಕೆ ನಿಟ್ಟುಸಿರು ಬಿಡುತ್ತಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...