2020ರ ಕೊನೆಯ ಘಟ್ಟದಲ್ಲಿ ನಾವಿದ್ದೇವೆ. ಎಲ್ಲಾ ವರ್ಷಗಳಿಗಿಂತ ಭಿನ್ನವಾಗಿದ್ದ 2020ರನ್ನ ನಾವು ಹೇಗೆ ಕಳೆದೆವು ಅಂತಾ ಅನೇಕರು ಆತ್ಮಾವಲೋಕನ ಮಾಡಿಕೊಳ್ಳೋಕೆ ಪ್ರಾರಂಭಿಸಿದ್ದಾರೆ. ಕೊರೊನಾ ವೈರಸ್ನ ಆಗಮನದಿಂದಾಗಿ ಈ ವರ್ಷವು ನಾವೆಲ್ಲ ನಿರೀಕ್ಷಿಸಿದಂತಿಲ್ಲ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ 2020ರ ಬಗ್ಗೆ ಸಾಕಷ್ಟು ಟ್ರೋಲ್ಗಳು ಹರಿದಾಡುತ್ತಲೇ ಇವೆ. ಈ ನಡುವೆ 2020ರ ಬಗ್ಗೆ 10 ವರ್ಷಗಳ ಹಿಂದೆ ಬಾಲಕನೊಬ್ಬ ಬರೆದಿದ್ದ ಭವಿಷ್ಯ ಭಾರೀ ವೈರಲ್ ಆಗಿದೆ.
ಶಾಲೆಯ ವಾರ್ಷಿಕೋತ್ಸವದ ಪುಸ್ತಕವೊಂದರಲ್ಲಿ ಕೆವಿನ್ ಸಿಂಗ್ ಎಂಬಾತ 2020ರಲ್ಲಿ ಎಲ್ಲರೂ ಶಾಂತಿಯುತವಾಗಿ ಬದುಕುತ್ತಾರೆ. ಈ ವರ್ಷದಲ್ಲಿ ಪ್ರಪಂಚದ ಎಲ್ಲಾ ರೋಗಗಳು ಗುಣವಾಗಲಿದೆ ಎಂದು ಭವಿಷ್ಯ ನುಡಿದಿದ್ದ.
ಈ ಫೋಟೋ ಇದೀಗ ಟ್ವಿಟರ್ನಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ನಾವು ಮನೆಯಲ್ಲೇ ಶಾಂತಿಯುತವಾಗಿ ಬದುಕುತ್ತಿದ್ದೇವೆ ನಿಜ. ಆದರೆ ಕೊರೊನಾ ವೈರಸ್ಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಅಭಿಪ್ರಾಯ ಹೊರಹಾಕ್ತಿದ್ದಾರೆ.