ಮೊದಲೆಲ್ಲಾ ಆಫೀಸು, ಶಾಪಿಂಗ್, ಟ್ರಿಪ್ ಅಂತಿದ್ದ ಮಂದಿಯೆಲ್ಲ ಇದೀಗ ವರ್ಕ್ ಫ್ರಂ ಹೋಂಗೆ ಜೋತು ಹಾಕಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾ ಒಂದು ವರ್ಷವನ್ನೇ ಕಳೆದಿದ್ದಾರೆ. ಮನೆಯಲ್ಲಿ ಇರೋದ್ರಿಂದ ಅನೇಕರಿಗೆ ಅವರಲ್ಲಿದ್ದ ಪ್ರತಿಭೆಯನ್ನ ಇನ್ನಷ್ಟು ಸುಧಾರಿಸಿಕೊಳ್ಳೋಕೆ ಸಾಧ್ಯವಾಗಿದೆ.
ಮನೆಯನ್ನ ಪೇಟಿಂಗ್ ಮಾಡಬೇಕು ಅಂದರೆ ಕನಿಷ್ಟ ಅಂದ್ರೂನು ಎರಡ್ಮೂರು ದಿನಗಳಂತೂ ಬೇಕಾಗುತ್ತೆ. ಆದರೆ ಇಲ್ಲೊಬ್ಬ ವ್ಯಕ್ತಿ ಜಸ್ಟ್ 30 ಸೆಕೆಂಡ್ಗಳಲ್ಲಿ ಇಡೀ ಗೋಡೆಗೆ ಬಣ್ಣ ಬಳಿದಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅಲ್ಲದೇ ಮುಂದಿನ ಬಾರಿ ಮನೆಗೆ ಬಣ್ಣ ಬಳಿಯೋವಾಗ ಈತನನ್ನೇ ಮನೆಗೆ ಕರೆಸೋದು ಒಳ್ಳೆದು ಎಂದು ಕಮೆಂಟ್ ಮಾಡಿದ್ದಾರೆ.
https://youtu.be/UmKzrMNsFPo