ಕೂದಲನ್ನ ತೆಗೆಯುವ ಕ್ರೀಮ್ನ್ನು ಶೇವಿಂಗ್ ಕ್ರೀಮ್ ಎಂದು ತಪ್ಪಾಗಿ ಅರ್ಥೈಸಿಕೊಂಡ ವ್ಯಕ್ತಿಯೊಬ್ಬ ಅದನ್ನ ಮುಖಕ್ಕೆಲ್ಲ ಹಚ್ಚಿಕೊಂಡು ಪೇಚಿಗೆ ಸಿಲುಕಿದ್ದಾನೆ. ಆಸ್ಟ್ರೇಲಿಯಾದ ರೋನಾಲ್ಡ್ ವಾಕರ್ ಎಂಬಾತ ಈ ಯಡವಟ್ಟಿನಿಂದಾಗಿ ತನ್ನ ಕಣ್ಣು ಹುಬ್ಬಿನ ಕೂದಲು ಹಾಗೂ ತಲೆಗೂದಲನ್ನ ಕಳೆದುಕೊಂಡಿದ್ದಾನೆ.
22 ವರ್ಷದ ರೊನಾಲ್ಡ್ರ ಶೇವಿಂಗ್ ಕ್ರೀಂ ಖಾಲಿಯಾಗಿದ್ದರಿಂದ ಹೊಸ ಕ್ರೀಂನ್ನು ಬಳಕೆ ಮಾಡಲು ಮುಂದಾಗಿದ್ದರು. ಆದರೆ ಅವರು ಶೇವಿಂಗ್ ಕ್ರೀಮ್ನ ಬದಲಾಗಿ ಕೂದಲನ್ನ ತೆಗೆಯುವ ಕ್ರೀಂನ್ನು ತಪ್ಪಾಗಿ ಆಯ್ಕೆಮಾಡಿಕೊಂಡಿದ್ದರು. ಈ ಕ್ರೀಮ್ನ್ನು ಮುಖದ ತುಂಬೆಲ್ಲ ಹಚ್ಚಿಕೊಂಡಿದ್ದಾರೆ.
ನನಗೆ ಎಂದಿಗೂ ಶೇವಿಂಗ್ ಕ್ರೀಂ ಹಾಗೂ ಹೇರ್ ರಿಮೂವಲ್ ಕ್ರೀಂ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. ಆದರೆ ಇಂದಿನ ಅನುಭವದ ಬಳಿಕ ನನಗೆ ಇವೆರಡರ ನಡುವಿನ ವ್ಯತ್ಯಾಸ ಗೊತ್ತಾಗಿದೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಈ ಕ್ರೀಂನ್ನು ಹಾಕುತ್ತಿದ್ದಂತೆಯೇ ನನ್ನ ಮುಖ ಕೆಂಪಗಾಗತೊಡಗಿತು. ಅದೃಷ್ಟವಶಾತ್ ನಾನು ಗಡ್ಡಧಾರಿಯಲ್ಲ. ಆದರೆ ಇದೀಗ ನನ್ನ ತಲೆಯ ಮುಂಭಾಗದ ಕೂದಲು ಹಾಗೂ ಹುಬ್ಬಿನ ಕೂದಲು ಹೋಗಿದೆ ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.