alex Certify ʼಪ್ರೇಮʼ ನಿವೇದನೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರೇಮಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರೇಮʼ ನಿವೇದನೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರೇಮಿ…!

ಪ್ರೇಮಪಾಶದಲ್ಲಿ ’ಬೀಳುವ’ ಹಾಗೂ ’ಬಿದ್ದಿರುವ’ ಅನೇಕರನ್ನು ಕಂಡಿದ್ದೇವೆ. ತನ್ನ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಇದೇ ರೀತಿ ’ಬಿದ್ದಿರುವ’ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು ಭಾರೀ ನಗೆ ತರಿಸುವಂತಿದೆ.

ನಾಯಿಯೊಂದಿಗೆ ಮೊಣಕಾಲುದ್ದದ ನೀರಿನಲ್ಲಿ ಓಡಾಡುತ್ತಿದ್ದ ಮಾರಿಯಾ ಗುಲಿಯೊಟ್ಟಾ ಹೆಸರಿನ ಯುವತಿಯೊಬ್ಬರಿಗೆ ಅವರ ಬಹುದಿನಗಳ ಪ್ರೇಮಿ ಲೋಗನ್ ಜಾಕ್ಸನ್ ಪ್ರಪೋಸ್‌ ಮಾಡಲು ಮುಂದಾಗಿದ್ದಾರೆ. ತನ್ನ ಪ್ರೇಯಸಿಯನ್ನು ಚಕಿತಗೊಳಿಸುವ ಮುನ್ನ ಜಾಕ್ಸನ್‌ಗೆ ಆ ನೀರು ಸರ್‌ಪ್ರೈಸ್ ಕೊಟ್ಟಿದೆ.

ಈ ಸಂದರ್ಭದಲ್ಲೇ ನೀರಿನಲ್ಲಿ ಜಾರಿ ಬಿದ್ದ ಜಾಕ್ಸನ್, ಕೂಡಲೇ ಸಾವರಿಸಿಕೊಂಡು, ಹಾಗೇ ಮಂಡಿಯೂರಿ ನಿಂತು ಆಕೆಗೆ ಪ್ರಪೋಸ್ ಮಾಡಿದ್ದಾರೆ. ಆತನ ಈ ಪ್ರೇಮನಿವೇದನೆಗೆ ಮಾರಿಯಾ ಸಮ್ಮತಿ ಸೂಚಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.

He fell so hard he popped up with a ring!!! I’m so excited but first I have to stop laughing?

Posted by Maria Gugliotta on Saturday, July 4, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...