ಪ್ರೇಮಪಾಶದಲ್ಲಿ ’ಬೀಳುವ’ ಹಾಗೂ ’ಬಿದ್ದಿರುವ’ ಅನೇಕರನ್ನು ಕಂಡಿದ್ದೇವೆ. ತನ್ನ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಇದೇ ರೀತಿ ’ಬಿದ್ದಿರುವ’ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು ಭಾರೀ ನಗೆ ತರಿಸುವಂತಿದೆ.
ನಾಯಿಯೊಂದಿಗೆ ಮೊಣಕಾಲುದ್ದದ ನೀರಿನಲ್ಲಿ ಓಡಾಡುತ್ತಿದ್ದ ಮಾರಿಯಾ ಗುಲಿಯೊಟ್ಟಾ ಹೆಸರಿನ ಯುವತಿಯೊಬ್ಬರಿಗೆ ಅವರ ಬಹುದಿನಗಳ ಪ್ರೇಮಿ ಲೋಗನ್ ಜಾಕ್ಸನ್ ಪ್ರಪೋಸ್ ಮಾಡಲು ಮುಂದಾಗಿದ್ದಾರೆ. ತನ್ನ ಪ್ರೇಯಸಿಯನ್ನು ಚಕಿತಗೊಳಿಸುವ ಮುನ್ನ ಜಾಕ್ಸನ್ಗೆ ಆ ನೀರು ಸರ್ಪ್ರೈಸ್ ಕೊಟ್ಟಿದೆ.
ಈ ಸಂದರ್ಭದಲ್ಲೇ ನೀರಿನಲ್ಲಿ ಜಾರಿ ಬಿದ್ದ ಜಾಕ್ಸನ್, ಕೂಡಲೇ ಸಾವರಿಸಿಕೊಂಡು, ಹಾಗೇ ಮಂಡಿಯೂರಿ ನಿಂತು ಆಕೆಗೆ ಪ್ರಪೋಸ್ ಮಾಡಿದ್ದಾರೆ. ಆತನ ಈ ಪ್ರೇಮನಿವೇದನೆಗೆ ಮಾರಿಯಾ ಸಮ್ಮತಿ ಸೂಚಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
https://www.facebook.com/mgugliotta01/videos/10224336306540371/?t=2