alex Certify ಓ ಮೈ ಗಾಡ್…! ಮಾಸ್ಕ್ ತೆಗೆದು ನೋಡಿ ಶಾಕ್ ಆದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓ ಮೈ ಗಾಡ್…! ಮಾಸ್ಕ್ ತೆಗೆದು ನೋಡಿ ಶಾಕ್ ಆದ ವ್ಯಕ್ತಿ

ಇರ್ವಿನ್: ಸುಂದರವಾಗಿ ಕಾಣಬೇಕು ಎಂಬ ಆಸೆ ಯಾರಿಗೆ ತಾನೆ ಇರಲ್ಲ. ಸೌಂದರ್ಯ ವೃದ್ಧಿಗಾಗಿ ಏನೆಲ್ಲ ಸರ್ಕಸ್ ಮಾಡುತ್ತೇವೆ. ಹೀಗೆ ವ್ಯಕ್ತಿಯೊಬ್ಬ ಸೌಂದರ್ಯಕ್ಕಾಗಿ ಫೇಸ್ ಮಾಸ್ಕ್ ಹಚ್ಚಿಕೊಂಡು ಕೆಲ ಸಮಯದ ಬಳಿಕ ರಿಮೂವ್ ಮಾಡಿದಾಗ ಶಾಕ್ ಆದ ಪ್ರಸಂಗ ನಡೆದಿದೆ.

ಸ್ಕಾಟ್ ಲ್ಯಾಂಡ್ ನ ಇರ್ವಿನ್ ನಗರದ ಜಾನ್ ಮಿಚನ್ ಎಂಬಾತ ತನ್ನ ಪತ್ನಿಗೆ ಪೀಲ್-ಆಫ್-ಫೇಸ್ ಮಾಸ್ಕ್ ಹಚ್ಚಿಕೊಳ್ಳಲು ಸಹಾಯ ಮಾಡುವಂತೆ ಕೇಳಿದ್ದಾನೆ. ಆದರೆ ಆಕೆ ನಿರಾಕರಿಸಿದಾಗ ತಾನೇ ಹಚ್ಚಿಕೊಳ್ಳಲು ಮುಂದಾಗಿದ್ದಾನೆ. ಮಾಸ್ಕ್ ಬಳಿದುಕೊಳ್ಳುವಾಗ ಪತ್ನಿ ಕೆಲ ಸಲಹೆ ನೀಡಿದ್ದಾಳೆ. ಆದರೆ ಜಾನ್ ಮಿಚನ್ ಆಕೆ ನೀಡಿದ ಸಲಹೆಯನ್ನು ಸರಿಯಾಗಿ ಕೇಳಿಸಿಕೊಳ್ಳದೇ ಪೀಲ್-ಆಫ್-ಫೇಸ್ ಮಾಸ್ಕ್ ಮುಖಕ್ಕೆ ಬಳಿದುಕೊಂಡಿದ್ದಾನೆ. ಹೀಗೆ ಮಾಸ್ಕ್ ಹಚ್ಚಿಕೊಳ್ಳುವಾಗ ಹುಬ್ಬು, ಕಣ್ಣಿನ ರಪ್ಪೆ, ತುಟಿ ಸೇರಿದಂತೆ ಇಡೀ ಮುಖಕ್ಕೆ ಹಚ್ಚಿಕೊಂಡಿದ್ದಾನೆ.

ಕೆಲ ಸಮಯದ ಬಳಿಕ ಮಾಸ್ಕ್ ತೆಗೆಯಲು ಹೋಗಿದ್ದಾನೆ. ಮಾಸ್ಕ್ ಜೊತೆಗೆ ಕಣ್ಣಿನ ರಪ್ಪೆಗಳು, ಹುಬ್ಬು ಕೂಡ ಕಿತ್ತುಕೊಂಡು ಬಂದಿದೆ. ಸೌಂದರ್ಯ ಸಲಹೆಗಳನ್ನು ಸರಿಯಾಗಿ ತಿಳಿದುಕೊಳ್ಳದಿದ್ದಾಗ ಎಂತಹ ಅವಾಂತರಗಳು ನಡೆಯುತ್ತೆ ಎಂಬುದಕ್ಕೆ ಇದೊಂದು ಉದಾಹರಣೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...