alex Certify ಗೆಳತಿಯನ್ನು ಇಂಪ್ರೆಸ್‌ ಮಾಡಲು ಹೋದವನು ಬಿಲ್‌ ನೋಡಿ ಕಕ್ಕಾಬಿಕ್ಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯನ್ನು ಇಂಪ್ರೆಸ್‌ ಮಾಡಲು ಹೋದವನು ಬಿಲ್‌ ನೋಡಿ ಕಕ್ಕಾಬಿಕ್ಕಿ…!

ಡೇಟಿಂಗ್ ಆರಂಭಿಸಿದ ಮೊದಲ ದಿನಗಳಲ್ಲಿ ಸಂಗಾತಿಯನ್ನು ಇಂಪ್ರೆಸ್ ಮಾಡಲು ಮಂದಿ ಏನೇನೋ ಸಾಹಸ ಮಾಡುವುದು ಸಹಜ. ಆದರೆ ಈ ಹುಚ್ಚು ವಿಪರೀತವಾಗಿ ಕೆಲವು ಮಂದಿ ಒಂದು ಹೆಜ್ಜೆ ಮುಂದೆ ಹೋಗಿ ಹೀರೋ ಆಗಲು ಯತ್ನಿಸಿ ನಗೆಪಾಟಲಿಗೀಡಾಗುತ್ತಾರೆ.

ತನ್ನ ಸಂಗಾತಿಯನ್ನು ಫ್ಯಾನ್ಸಿ ಭೋಜನಕ್ಕೆ ಕರೆದುಕೊಂಡು ಹೋದ ವ್ಯಕ್ತಿಯೊಬ್ಬರು ತಾನೆಷ್ಟು ಧಾರಾಳಿ ಎಂದು ತೋರಿಸಿಕೊಳ್ಳಲು ವೇಟ್ರೆಸ್‌ಗೆ ದೊಡ್ಡ ಟಿಪ್ ಕೊಟ್ಟಿದ್ದಾನೆ. ಏನೋ ಬಿಸಿಯಲ್ಲಿ ಆ ಪಾಟಿ ದುಡ್ಡು ಕೊಟ್ಟ ಆತನಿಗೆ ತನ್ನ ಬಳಿ ಇದ್ದಿದ್ದೇ ಅಷ್ಟೇ ಕಾಸು ಎಂದು ಅರಿವಿಗೆ ಬಂದ ಕೂಡಲೇ ಆಕೆಯ ಬಳಿಗೆ ಬಂದು ಟಿಪ್ ಹಣ ವಾಪಸ್ ಕೊಡುವಂತೆ ಕೇಳಿದ್ದಾನೆ ಭೂಪ…!

ಬೆಂಗಳೂರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಗ್ಯಾಗ್ ರೇಪ್, ಪೈಶಾಚಿಕ ಕೃತ್ಯವೆಸಗಿದ್ದ ಕಾಮುಕರ ಮೇಲೆ ಫೈರಿಂಗ್

“ಅತ್ಯಂತ ಉತ್ಕೃಷ್ಟ ಗುಣಮಟ್ಟದ ವೈನ್‌, ಅತ್ಯಂತ ದುಬಾರಿ ಎಂಟ್ರಿ, ಪ್ರತಿಯೊಂದು ರೀತಿಯ ಅಪೆಟೈಜರ್‌ ಅನ್ನೂ ಆರ್ಡರ್‌ ಮಾಡಿದ ಆತ. ಇಬ್ಬರೂ ಜೊತೆಗೆ ಬಿಲ್ ಕೊಡುವಿರೋ ಅಥವಾ ಪ್ರತ್ಯೇಕವಾಗೋ ಎಂದು ನಾನು ಕೇಳಿದಾಗ ’ನನ್ನೊಂದಿಗಿದ್ದಾಗ ನೀನು ದುಡ್ಡು ಕಟ್ಟುವುದೇ ಬೇಡ ಬೇಬ್‌” ಎಂದ ಆತ ತನ್ನ ಕ್ರೆಡಿಟ್ ಕಾರ್ಡ್ ಕೊಟ್ಟ. ನಾನು ರಸೀದಿಯನ್ನು ತಂದು $289.0 ಬಿಲ್ ಆಗಿದೆ ಎಂದಾಗ ಆತ ಕಣ್ಣನ್ನೂ ಮಿಟುಕಿಸದೇ ಅಷ್ಟು ದುಡ್ಡು ಪಾವತಿ ಮಾಡಿ, $100 ಟಿಪ್‌ ಕೊಡುವ ದೊಡ್ಡ ಶೋ ಸಹ ಮಾಡಿದ” ಎಂದು ಈ ಅನಾಮಧೇಯ ವೇಟ್ರೆಸ್ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಾದ ಬಳಿಕ ತನ್ನ ಡೇಟಿಂಗ್ ಸಂಗಾತಿಯೊಂದಿಗೆ ಅಲ್ಲಿಂದ ಹೊರಟ ಆತ ಕೆಲ ಹೊತ್ತಿನ ಬಳಿಕ ಅಲ್ಲಿಗೆ ಬಂದು, “ಟಿಪ್‌ ಅನ್ನು ಇಪ್ಪತ್ತು ಡಾಲರ್‌ಗಳಿಗೆ ಇಟ್ಟುಕೊಳ್ಳಿ. ನಾನು ನನ್ನ ಡೇಟ್‌ಗಾಗಿ ಅದನ್ನು ಪಾವತಿ ಮಾಡಿದೆ. ನಿಮಗೆ ಅರ್ಥವಾಯಿತೇ” ಎಂದು ವೇಟ್ರೆಸ್‌ಗೆ ಆತ ಹೇಳಿದ್ದಾನೆ.

ಅದಾಗಲೇ ಕೊಟ್ಟಿದ್ದ ಟಿಪ್‌ ಅನ್ನು $100ರಿಂದ $20ಕ್ಕೆ ಇಳಿಸಲು ಮತ್ತೊಂದು ರಸೀದಿ ಪಡೆಯಬೇಕೆಂದು ವೇಟ್ರೆಸ್ ಹೇಳಿದ ಬಳಿಕ ಒಲ್ಲದ ಮನಸ್ಸಿನಿಂದಲೇ ಈ ಫಾರ್ಮಾಲಿಟಿ ಮುಗಿಸಿ $80 ಹಿಂದಕ್ಕೆ ಪಡೆದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...