ತನ್ನ ಮನೆಯಷ್ಟು ಎತ್ತರವಿರುವ ಸೂರ್ಯಕಾಂತಿ ಗಿಡವೊಂದನ್ನು ನೋಡುವ ಮಗನ ಆಸೆಯನ್ನು ಈಡೇರಿಸಲು ಮುಂದಾದ ವ್ಯಕ್ತಿಯೊಬ್ಬರು, ಮನೆಯಂಗಳದಲ್ಲಿ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಅಷ್ಟುದ್ದ ಬೆಳೆಸಿದ್ದಾರೆ.
ಸ್ಟೆಲ್ಲನ್ ಸ್ಮಿತ್ ಹೆಸರಿನ ಈ ಹುಡುಗನ ಮನೆ ಮುಂದಿನ ಅಂಗಳದಲ್ಲಿ 20 ಅಡಿ ಉದ್ದದ ಸೂರ್ಯಕಾಂತಿ ಗಿಡವನ್ನು ಬೆಳೆಸಿದ್ದಾರೆ. ಆ ಗಿಡವು ಮನೆಯ ಛಾವಣಿಯನ್ನೂ ಮೀರಿ ನಿಂತು ಬೆಳೆದಿದೆ. ಕಳೆದ ಮಾರ್ಚ್‌ನಲ್ಲಿ ಸ್ಟೆಲ್ಲನ್ ತಂದೆ ಡಗ್ಲಾಸ್ ಈ ಗಿಡವನ್ನು ನೆಟ್ಟಿದ್ದರು. ಅವರು ಈ ಗಿಡದ ಬೀಜವನ್ನು ಜಾನ್ ಬಟ್ಲರ್ ಎಂಬಾತನಿಂದ ಖರೀದಿ ಮಾಡಿದ್ದರು.
ಈ ಬಟ್ಲರ್, ಉತ್ತರ ಅಮೆರಿಕದ ಅತ್ಯಂತ ಉದ್ದವಾದ ಸೂರ್ಯಕಾಂತಿ ಗಿಡವನ್ನು ನೆಟ್ಟಿದ್ದಾರೆ. ಅದು 26 ಅಡಿ ಉದ್ದ ಬೆಳೆದಿತ್ತು.