alex Certify ನಡು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದ ಅಪರಿಚಿತ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದ ಅಪರಿಚಿತ ವ್ಯಕ್ತಿ..!

ಬ್ರಿಟನ್​​ನಲ್ಲಿ ಕೊರೊನಾದ ಹಾವಳಿ ಮಿತಿಮೀರಿರೋದ್ರಿಂದ ಲಾಕ್​ಡೌನ್​ ಜಾರಿಯಲ್ಲಿದೆ. ಹೀಗಾಗಿ ಲಂಡನ್​ನ ಪ್ರಮುಖ ಬೀದಿಗಳು ಸದಾ ಕಾಲ ನಿರ್ಜನ ಸ್ಥಿತಿಯಲ್ಲೇ ಇರುತ್ತೆ.

ಎಲ್ಲಾದರೂ ಅಪರೂಪಕ್ಕೆ ಬೀದಿಗಳಲ್ಲಿ ವಾಕಿಂಗ್​ ಮಾಡುತ್ತಿರುವ, ಪ್ರಾಣಿಗಳ ಜೊತೆ ವಿಹಾರ ಮಾಡುತ್ತಿರುವ ಬೆರಳಣಿಕೆಯಷ್ಟು ಮಂದಿ ಗೋಚರವಾಗುತ್ತಾರೆ.

ಇಷ್ಟು ದಿನ ಬೀದಿಯಲ್ಲಿ ಜನರನ್ನೇ ಕಾಣದಿದ್ದ ಲಂಡನ್​ನ ಮಂದಿ ವಿಲಕ್ಷಣ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಮಧ್ಯ ಲಂಡನ್​​ನಲ್ಲಿ ಪ್ರತಿನಿತ್ಯದಂತೆ ವಾಕಿಂಗ್​ ಮಾಡೋದ್ರಲ್ಲಿ ಮಗ್ನರಾಗಿದ್ದ ಜನರು ಬೆತ್ತಲೆಯಾಗಿ ನಡೆದುಕೊಂಡು ಹೊಗ್ತಿದ್ದ ವ್ಯಕ್ತಿಯನ್ನು ಕಂಡು ಶಾಕ್​ ಆಗಿದ್ದಾರೆ.

ಯೆಸ್​..! ಮೈ ಮೇಲೆ ಒಂದಿಂಚೂ ಬಟ್ಟೆಯನ್ನ ಹಾಕಿಕೊಳ್ಳದ ವ್ಯಕ್ತಿಯೊಬ್ಬ ಪಾದಚಾರಿ ಮಾರ್ಗದಿಂದ ಅನತಿ ದೂರದಿಂದಲೇ ಹಾದು ಹೋಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ʼಫೇಸ್ಬುಕ್ʼ ಬಳಕೆದಾರರು ನೀವಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಜನವರಿ 24ರಂದು ಈ ಬೆತ್ತಲೆ ವ್ಯಕ್ತಿ ಬ್ರಿಟಿಷ್​ ಮ್ಯೂಸಿಯಂ ಸುತ್ತ ಕಾಣಿಸಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ ಆತ ಅಲ್ಲಿಂದ ಕೂಡಲೇ ಕಾಲ್ಕಿತ್ತ ಕಾರಣ ಆತನನ್ನ ಹುಡುಕೋದು ಕಷ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...