ಬ್ರಿಟನ್ನಲ್ಲಿ ಕೊರೊನಾದ ಹಾವಳಿ ಮಿತಿಮೀರಿರೋದ್ರಿಂದ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಲಂಡನ್ನ ಪ್ರಮುಖ ಬೀದಿಗಳು ಸದಾ ಕಾಲ ನಿರ್ಜನ ಸ್ಥಿತಿಯಲ್ಲೇ ಇರುತ್ತೆ.
ಎಲ್ಲಾದರೂ ಅಪರೂಪಕ್ಕೆ ಬೀದಿಗಳಲ್ಲಿ ವಾಕಿಂಗ್ ಮಾಡುತ್ತಿರುವ, ಪ್ರಾಣಿಗಳ ಜೊತೆ ವಿಹಾರ ಮಾಡುತ್ತಿರುವ ಬೆರಳಣಿಕೆಯಷ್ಟು ಮಂದಿ ಗೋಚರವಾಗುತ್ತಾರೆ.
ಇಷ್ಟು ದಿನ ಬೀದಿಯಲ್ಲಿ ಜನರನ್ನೇ ಕಾಣದಿದ್ದ ಲಂಡನ್ನ ಮಂದಿ ವಿಲಕ್ಷಣ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಮಧ್ಯ ಲಂಡನ್ನಲ್ಲಿ ಪ್ರತಿನಿತ್ಯದಂತೆ ವಾಕಿಂಗ್ ಮಾಡೋದ್ರಲ್ಲಿ ಮಗ್ನರಾಗಿದ್ದ ಜನರು ಬೆತ್ತಲೆಯಾಗಿ ನಡೆದುಕೊಂಡು ಹೊಗ್ತಿದ್ದ ವ್ಯಕ್ತಿಯನ್ನು ಕಂಡು ಶಾಕ್ ಆಗಿದ್ದಾರೆ.
ಯೆಸ್..! ಮೈ ಮೇಲೆ ಒಂದಿಂಚೂ ಬಟ್ಟೆಯನ್ನ ಹಾಕಿಕೊಳ್ಳದ ವ್ಯಕ್ತಿಯೊಬ್ಬ ಪಾದಚಾರಿ ಮಾರ್ಗದಿಂದ ಅನತಿ ದೂರದಿಂದಲೇ ಹಾದು ಹೋಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ʼಫೇಸ್ಬುಕ್ʼ ಬಳಕೆದಾರರು ನೀವಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!
ಜನವರಿ 24ರಂದು ಈ ಬೆತ್ತಲೆ ವ್ಯಕ್ತಿ ಬ್ರಿಟಿಷ್ ಮ್ಯೂಸಿಯಂ ಸುತ್ತ ಕಾಣಿಸಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ ಆತ ಅಲ್ಲಿಂದ ಕೂಡಲೇ ಕಾಲ್ಕಿತ್ತ ಕಾರಣ ಆತನನ್ನ ಹುಡುಕೋದು ಕಷ್ಟವಾಗಿದೆ.