alex Certify ನಿರಾಶ್ರಿತ ಮಹಿಳೆಗೆ ಅಪಾರ್ಟ್​ಮೆಂಟ್​ ಉಡುಗೊರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಾಶ್ರಿತ ಮಹಿಳೆಗೆ ಅಪಾರ್ಟ್​ಮೆಂಟ್​ ಉಡುಗೊರೆ…!

ಕ್ರೌಡ್​ ಫಂಡಿಂಗ್​ ಅಭಿಯಾನದ ಮೂಲಕ ಸಂಗ್ರಹಿಸಿದ ಹಣದಲ್ಲಿ ವ್ಯಕ್ತಿಯೊಬ್ಬ ನಿರಾಶ್ರಿತ ಮಹಿಳೆಗೆ ಅಪಾರ್ಟ್​ಮೆಂಟ್​ ಒಂದನ್ನ ಉಡುಗೊರೆಯಾಗಿ ನೀಡಿದ ವಿಶೇಷ ಕ್ಷಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಯೆಶಾಯ ಗಾರ್ಜಾ ಎಂಬವರು ಪಾದರಕ್ಷೆಯನ್ನೂ ಹಾಕದೇ ಬೀದಿಯಲ್ಲಿ ಅಲೆಯುತ್ತಿದ್ದ ಮಹಿಳೆಯನ್ನ ಗಮನಿಸಿದರು. ಈಕೆಗೆ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದರು. ಹೀಗಾಗಿ ಆಕೆಗೆ ಸ್ವಲ್ಪ ಧನಸಹಾಯದ ಜೊತೆಗೆ ಬಟ್ಟೆ ಬರೆಗಳನ್ನ ನೀಡಿದ್ದಾರೆ.

ಗಾರ್ಜಾ ನಿತ್ಯ ಮನೆಯಿಲ್ಲದ ರಾಬಿನ್​ರನ್ನ ಭೇಟಿಯಾಗುತ್ತಲೇ ಇದ್ದರು. ಪ್ರತಿ ಬಾರಿ ಭೇಟಿಯಾದಾಗಲೂ ಆಕೆಗೆ ಒಂದಿಲ್ಲೊಂದು ವಸ್ತುಗಳನ್ನ ಉಡುಗೊರೆಯಾಗಿ ನೀಡುತ್ತಿದ್ದರು.

ಅಂತಿಮವಾಗಿ ಆಕೆಗೆ ಉಳಿಯಲು ಅಪಾರ್ಟ್​ಮೆಂಟ್​ ನೀಡುವ ಮೂಲಕ ಆಕೆಯನ್ನ ಅಚ್ಚರಿಗೊಳಿಸಿದ್ದಾರೆ. 10 ವರ್ಷಗಳಿಂದ ನಿರಾಶ್ರಿತೆಯಾಗಿ ಜೀವನ ಸಾಗಿಸುತ್ತಿದ್ದ ರಾಬಿನ್​ ಕಣ್ಣಲ್ಲಿ ಆನಂದ ಭಾಷ್ಪ ಜಿನುಗಿದೆ.

ಟಿಕ್​ಟಾಕ್​ನಲ್ಲಿ ಈಕೆಯೊಂದಿಗಿನ ವಿಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದ ಗಾರ್ಜಾ ಕ್ರೌಡ್​ ಫಂಡಿಂಗ್​ನಿಂದ ದೊರೆತ 42 ಲಕ್ಷ ರೂಪಾಯಿ ಹಣದಲ್ಲಿ ನಿರಾಶ್ರಿತ ಮಹಿಳೆಗೆ ಈ ರೀತಿಯ ಸಹಾಯ ಮಾಡಿದ್ದಾರೆ.

https://youtu.be/zbQVa52P2Vg?t=2

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...