ಕ್ರೌಡ್ ಫಂಡಿಂಗ್ ಅಭಿಯಾನದ ಮೂಲಕ ಸಂಗ್ರಹಿಸಿದ ಹಣದಲ್ಲಿ ವ್ಯಕ್ತಿಯೊಬ್ಬ ನಿರಾಶ್ರಿತ ಮಹಿಳೆಗೆ ಅಪಾರ್ಟ್ಮೆಂಟ್ ಒಂದನ್ನ ಉಡುಗೊರೆಯಾಗಿ ನೀಡಿದ ವಿಶೇಷ ಕ್ಷಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯೆಶಾಯ ಗಾರ್ಜಾ ಎಂಬವರು ಪಾದರಕ್ಷೆಯನ್ನೂ ಹಾಕದೇ ಬೀದಿಯಲ್ಲಿ ಅಲೆಯುತ್ತಿದ್ದ ಮಹಿಳೆಯನ್ನ ಗಮನಿಸಿದರು. ಈಕೆಗೆ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದರು. ಹೀಗಾಗಿ ಆಕೆಗೆ ಸ್ವಲ್ಪ ಧನಸಹಾಯದ ಜೊತೆಗೆ ಬಟ್ಟೆ ಬರೆಗಳನ್ನ ನೀಡಿದ್ದಾರೆ.
ಗಾರ್ಜಾ ನಿತ್ಯ ಮನೆಯಿಲ್ಲದ ರಾಬಿನ್ರನ್ನ ಭೇಟಿಯಾಗುತ್ತಲೇ ಇದ್ದರು. ಪ್ರತಿ ಬಾರಿ ಭೇಟಿಯಾದಾಗಲೂ ಆಕೆಗೆ ಒಂದಿಲ್ಲೊಂದು ವಸ್ತುಗಳನ್ನ ಉಡುಗೊರೆಯಾಗಿ ನೀಡುತ್ತಿದ್ದರು.
ಅಂತಿಮವಾಗಿ ಆಕೆಗೆ ಉಳಿಯಲು ಅಪಾರ್ಟ್ಮೆಂಟ್ ನೀಡುವ ಮೂಲಕ ಆಕೆಯನ್ನ ಅಚ್ಚರಿಗೊಳಿಸಿದ್ದಾರೆ. 10 ವರ್ಷಗಳಿಂದ ನಿರಾಶ್ರಿತೆಯಾಗಿ ಜೀವನ ಸಾಗಿಸುತ್ತಿದ್ದ ರಾಬಿನ್ ಕಣ್ಣಲ್ಲಿ ಆನಂದ ಭಾಷ್ಪ ಜಿನುಗಿದೆ.
ಟಿಕ್ಟಾಕ್ನಲ್ಲಿ ಈಕೆಯೊಂದಿಗಿನ ವಿಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದ ಗಾರ್ಜಾ ಕ್ರೌಡ್ ಫಂಡಿಂಗ್ನಿಂದ ದೊರೆತ 42 ಲಕ್ಷ ರೂಪಾಯಿ ಹಣದಲ್ಲಿ ನಿರಾಶ್ರಿತ ಮಹಿಳೆಗೆ ಈ ರೀತಿಯ ಸಹಾಯ ಮಾಡಿದ್ದಾರೆ.
https://youtu.be/zbQVa52P2Vg?t=2