alex Certify ಕೊರೊನಾಗೆ ಹೆದರಿ ಬರೋಬ್ಬರಿ 3 ತಿಂಗಳು ಏರ್​ಪೋರ್ಟ್​ನಲ್ಲೇ ಅವಿತಿದ್ದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾಗೆ ಹೆದರಿ ಬರೋಬ್ಬರಿ 3 ತಿಂಗಳು ಏರ್​ಪೋರ್ಟ್​ನಲ್ಲೇ ಅವಿತಿದ್ದ ಭೂಪ..!

ಕ್ಯಾಲಿಫೋರ್ನಿಯಾದ 36 ವರ್ಷದ ವ್ಯಕ್ತಿಯೊಬ್ಬ ಕೊರೊನಾದ ಭಯದ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ವಿಮಾನ ನಿಲ್ದಾಣದಲ್ಲಿಯೇ ವಾಸ ಮಾಡುತ್ತಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ.

ಆದಿತ್ಯ ಸಿಂಗ್​ ಅಕ್ಟೋಬರ್​​ 19ರಂದು ಲಾಸ್​​ ಏಂಜಲೀಸ್​​ನಿಂದ ಓ ಹೇರ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಕೊರೊನಾ ಭಯದಿಂದಾಗಿ ಅವರು ಹೊರಗಡೆ ಎಲ್ಲಿಯೂ ಹೋಗದೇ ವಿಮಾನ ನಿಲ್ದಾಣದ ಸುರಕ್ಷಿತ ವಿಭಾಗದಲ್ಲಿ ವಾಸ ಮಾಡ್ತಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅದು ಹೇಗೋ ಕಳ್ಳಾಟ ಮಾಡಿಕೊಂಡಿದ್ದ ಆದಿತ್ಯ ಸಿಂಗ್​ ಜನವರಿ 16ನೇ ತಾರೀಖಿನವರೆಗೂ ಸುರಕ್ಷಿತ ವಲಯದಲ್ಲಿ ನೆಲೆಸಿದ್ದಾರೆ. ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಆದಿತ್ಯ ಸಿಂಗ್​​ರನ್ನ ಪತ್ತೆ ಮಾಡಿದ್ದಾರೆ.

ಆದಿತ್ಯ ಸಿಂಗ್​ರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಲಾಗಿದ್ದು ಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಸ್ನಾತಕೋತ್ತರ ಪದವೀಧರನಾಗಿರುವ ಆದಿತ್ಯ ಸಿಂಗ್​​ ಪ್ರಸ್ತುತ ನಿರುದ್ಯೋಗಿಯಾಗಿದ್ದಾರೆ. ಲಾಸ್​ ಏಂಜಲೀಸ್​ನಲ್ಲಿ ಆದಿತ್ಯ ಸಿಂಗ್​ ತಮ್ಮ ರೂಮ್​ ಮೇಟ್​ಗಳ ಜೊತೆ ವಾಸವಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...