ಕ್ಯಾಲಿಫೋರ್ನಿಯಾದ 36 ವರ್ಷದ ವ್ಯಕ್ತಿಯೊಬ್ಬ ಕೊರೊನಾದ ಭಯದ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ವಿಮಾನ ನಿಲ್ದಾಣದಲ್ಲಿಯೇ ವಾಸ ಮಾಡುತ್ತಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ.
ಆದಿತ್ಯ ಸಿಂಗ್ ಅಕ್ಟೋಬರ್ 19ರಂದು ಲಾಸ್ ಏಂಜಲೀಸ್ನಿಂದ ಓ ಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಕೊರೊನಾ ಭಯದಿಂದಾಗಿ ಅವರು ಹೊರಗಡೆ ಎಲ್ಲಿಯೂ ಹೋಗದೇ ವಿಮಾನ ನಿಲ್ದಾಣದ ಸುರಕ್ಷಿತ ವಿಭಾಗದಲ್ಲಿ ವಾಸ ಮಾಡ್ತಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಅದು ಹೇಗೋ ಕಳ್ಳಾಟ ಮಾಡಿಕೊಂಡಿದ್ದ ಆದಿತ್ಯ ಸಿಂಗ್ ಜನವರಿ 16ನೇ ತಾರೀಖಿನವರೆಗೂ ಸುರಕ್ಷಿತ ವಲಯದಲ್ಲಿ ನೆಲೆಸಿದ್ದಾರೆ. ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಆದಿತ್ಯ ಸಿಂಗ್ರನ್ನ ಪತ್ತೆ ಮಾಡಿದ್ದಾರೆ.
ಆದಿತ್ಯ ಸಿಂಗ್ರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಲಾಗಿದ್ದು ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ನಾತಕೋತ್ತರ ಪದವೀಧರನಾಗಿರುವ ಆದಿತ್ಯ ಸಿಂಗ್ ಪ್ರಸ್ತುತ ನಿರುದ್ಯೋಗಿಯಾಗಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ಆದಿತ್ಯ ಸಿಂಗ್ ತಮ್ಮ ರೂಮ್ ಮೇಟ್ಗಳ ಜೊತೆ ವಾಸವಾಗಿದ್ದರು.