alex Certify ಬೃಹತ್ ಗಾತ್ರದ ಮೊಸಳೆಯೊಂದಿಗೆ ಹೋರಾಡಿ ನಾಯಿಯನ್ನು ರಕ್ಷಿಸಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೃಹತ್ ಗಾತ್ರದ ಮೊಸಳೆಯೊಂದಿಗೆ ಹೋರಾಡಿ ನಾಯಿಯನ್ನು ರಕ್ಷಿಸಿದ ವ್ಯಕ್ತಿ

ಫ್ಲೋರಿಡಾ: ಬರೋಬ್ಬರಿ 13 ಅಡಿಯ ಮೊಸಳೆಯೊಂದಿಗೆ ಹೋರಾಡಿ ಅವರು ತನ್ನ ನಾಯಿಯನ್ನು ಕಾಪಾಡಿಕೊಂಡಿದ್ದಾರೆ.

ಫ್ಲೋರಿಡಾದ ಟ್ರೆಂಟ್‌ ಟ್ವೆಡೆಲ್ ಮೊಸಳೆಯೊಂದಿಗೆ ಹೋರಾಡಿದ ವೀರ.‌ ವೆಸ್ಲಿ ಚಾಪೆಲ್‌ ಫಾರ್ಮ್ ನಲ್ಲಿ ಅವರ 6 ವರ್ಷದ ನಾಯಿ ಲೋಕಿ ಓಡಾಡುತ್ತಿದ್ದಾಗ ಮೊಸಳೆ ದಾಳಿ ನಡೆಸಿತ್ತು.

ಅದನ್ನು ಗಮನಿಸಿದ ಟ್ವೆಡೆಲ್ ತಕ್ಷಣ ನಾಯಿಯ‌ ಕುತ್ತಿಗೆ ಹಿಡಿದು ಮೊಸಳೆಯನ್ನು ದೂಡಲು ಯತ್ನಿಸಿದರು.‌ ಆದರೆ, ಮೊಸಳೆ ನಾಯಿಯನ್ನು ಬಿಡದೇ ನೀರಿಗೆ ಎಳೆದೊಯ್ದಿತ್ತು.‌ ಮೊಳಕಾಲುವರೆಗೂ ನೀರಿಗೆ ತೆರಳಿದ ಟ್ವೇಡೆಲ್‌ ಮೊಸಳೆಯೊಂದಿಗೆ ಹೋರಾಡಿ ನಾಯಿಯನ್ನು ಕೊನೆಗೂ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ವೆಡೆಲ್ ಅವರಿಗೆ ಚಿಕ್ಕಪುಟ್ಟ ಗಾಯವಾಗಿದ್ದು, ನಾಯಿಯ ಕಾಲಿಗೆ ತುಂಬಾ ಘಾಸಿಯಾಗಿದೆ.‌ ಶಸ್ತ್ರ ಚಿಕಿತ್ಸೆ ಮಾಡಿ ಲೋಹದ ಪಟ್ಟಿ ಅಳವಡಿಸಲಾಗಿದೆ.

ಫ್ಲೋರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಸಂಘ ಮೊಸಳೆಯನ್ನು ಹಿಡಿದಿದೆ. ಟ್ವೆಡೆಲ್ ತನ್ನ ಒಂದು ಹುಂಜವನ್ನು ಇಟ್ಟು ಮೊಸಳೆ‌ ಹಿಡಿಯಲು ನೆರವಾಗಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...