alex Certify ಮನೆಯ ಮೇಲಿತ್ತೊಂದು ರಹಸ್ಯ ಕೋಣೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಮೇಲಿತ್ತೊಂದು ರಹಸ್ಯ ಕೋಣೆ….!

ಅಪಾರ್ಟ್ಮೆಂಟ್ ಒಂದರಲ್ಲಿ ಯಾರಿಗೂ ಕಾಣಿಸದೇ ಇರುವ ಮನೆ ಪತ್ತೆಯಾಗಿದೆ.‌
“ಅಟ್ಟದ ಮೇಲೊಂದು ಗುಪ್ತ ಮನೆ” ಎಂಬ ಅಡಿ ಬರಹದೊಂದಿಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಅದೊಂದು ಭಯಾನಕ ಸಿನೆಮಾದ ರೀತಿಯಲ್ಲಿ ಕತ್ತಲೆಯಲ್ಲಿ ಗಲೀಜು ತುಂಬಿದ, ಮುರಿದು ಬೀಳುತ್ತಿರುವ ಮನೆ ಕಾಣಿಸುತ್ತದೆ.

ಬಾತ್ ರೂಂ, ವಾಷ್ ಬೇಸಿನ್ ಟಾಯ್ಲೆಟ್, ಶೆಲ್ಫ್ ಗಳು ಹೀಗೆ ಮನೆಗೆ ಬೇಕಾದ ಎಲ್ಲವೂ ಇವೆ. ನನ್ನ ಮನೆಯ ಮೇಲೆಯೇ ಇಂಥದ್ದೊಂದು ಗುಪ್ತ ಮನೆ ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಆ ಅಪಾರ್ಟ್ ಮೆಂಟ್ ನಲ್ಲಿ ಇಂಥದ್ದೊಂದು ಮನೆ ಏಕಿದೆ ಎಂಬುದನ್ನು ಅವರು ಕಂಡು ಹಿಡಿದು ಬರೆದಿದ್ದಾರೆ.

ಮೊದಲು ಅಪಾರ್ಟ್ಮೆಂಟ್ ಒಂದು ಉಗ್ರಾಣವಾಗಿತ್ತು. ಮನೆಯ ಮಾಲೀಕರು ಮೇಲ್ಮಹಡಿಯಲ್ಲಿ ಉಳಿಯುತ್ತಿದ್ದರು.‌ ನಂತರ ಅದನ್ನು ಚರ್ಚ್ ಆಗಿ ಮಾರ್ಪಡಿಸಲಾಯಿತು. ಆಗ ಎದುರಿಗೆ ‘ಸಿ’ ಆಕೃತಿಯಲ್ಲಿ ಕಟ್ಟಡ ಮಾರ್ಪಡಿಸಿ ಎತ್ತರದ ಗೋಡೆ ಕಟ್ಟಲಾಯಿತು. ಮೊದಲ ಮಹಡಿಯ ಮನೆಯ ಬಗ್ಗೆ ಮಹತ್ವ ಕೊಡದೇ ಅದಕ್ಕೆ ತೆರಳಲು ಒಂದು ಚೌಕಾಕಾರದ ಕಿಂಡಿಯನ್ನು ಮಾತ್ರ ಬಿಡಲಾಯಿತು. ಚರ್ಚ್ ಸ್ಥಳಾಂತರದ ನಂತರವೂ ಮನೆ ಪಾಳು ಬಿದ್ದುಕೊಂಡು ಹಾಗೆಯೇ ಇದೆ ಎಂದು ವಿವರಿಸಿದ್ದಾರೆ. ನೆಟ್ಟಿಗರು ಈ ಫೋಟೋಕ್ಕೆ ಸಾಕಷ್ಟು ಹಾಸ್ಯದ ಕಮೆಂಟ್ ಮಾಡಿದ್ದಾರೆ. “ಅಟ್ಟದ ಮನೆಯೊಳಗೆ ಇನ್ನೊಂದು ಅಟ್ಟವಿರಬಹುದು ನೋಡಿ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...