alex Certify ಕಡಲತೀರದಲ್ಲಿ ವಾಕಿಂಗ್‌ ಹೋದವನ ಕಣ್ಣಿಗೆ ಬಿತ್ತು ಮಿದುಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಲತೀರದಲ್ಲಿ ವಾಕಿಂಗ್‌ ಹೋದವನ ಕಣ್ಣಿಗೆ ಬಿತ್ತು ಮಿದುಳು

Man Finds Brain Wrapped in Foil on Beach, Officials Confirm It Does Not Belong to Humans

ನ್ಯೂಯಾರ್ಕ್: ಸಮುದ್ರ ತೀರದಲ್ಲಿ ಕಪ್ಪೆ ಚಿಪ್ಪು, ಹವಳಗಳು ಸಿಕ್ಕಬಹುದು. ಆದರೆ, ಬೆಳಗಿ‌ನ ವಾಕಿಂಗ್ ಗೆ ಹೋದ ವ್ಯಕ್ತಿಯೊಬ್ಬನಿಗೆ ಸುರುಳಿ ಸುರುಳಿಯಾಗಿದ್ದ ಮಿದುಳು ಸಿಕ್ಕಿಬಿಟ್ಟಿತ್ತು. ಇದನ್ನು ನೋಡಿ ಆತ ಬೆಚ್ಚಿ ಬಿದ್ದಿದ್ದ.

ಈ ಘಟನೆ ನಡೆದಿದ್ದು, ಅಮೆರಿಕಾದ ವಿಸ್ಕಾನ್ಸಿನ್ ಸಮೀಪದ ರಸೀನ್ ನಲ್ಲಿ. ಜಿಮ್ಮಿ ಸೆಂಡಾ ಎಂಬ 46 ವರ್ಷದ ವ್ಯಕ್ತಿ ಸ್ಯಾಮ್ಯುಯಲ್ ಮೇಯರ್ ಪಾರ್ಕ್ ಬಳಿಯ ಮಿಚಿಗನ್ ಲೇಕ್ ಸಮೀಪ ವಾಕಿಂಗ್ ಹೋಗುವಾಗ ಮಿದುಳು ಕಂಡಿದ್ದಾರೆ.

“ದೂರದಿಂದ ನನಗೆ ಸತ್ತ ಕೋಳಿಯ ಎದೆಯು ಬಿದ್ದಂತೆ ಕಂಡಿತು. ಹತ್ತಿರ ಹೋಗಿ ನೋಡಿದಾಗ ಅದೊಂದು ಮಿದುಳಾಗಿತ್ತು. ಆ ಕ್ಷಣ ನನಗೆ ಏನಾಯಿತು ಎಂದು ತಿಳಿಯಲಿಲ್ಲ” ಎಂದು ಜಿಮ್ಮಿ‌ ಹೇಳಿದ್ದಾರೆ.

ಜಿಮ್ಮಿ ಮಿದುಳು ಕಂಡ ವಿಷಯದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದು, ಮಿದುಳು ಮಾನವನದ್ದಲ್ಲ ಎಂಬುದನ್ನು ಖಚಿತ ಮಾಡಿದ್ದಾರೆ. ಮಿದುಳು ಯಾವ ಪ್ರಾಣಿಗೆ ಸೇರಿದ್ದು ಎಂಬುದರ ಪರಿಶೀಲನೆ ಇನ್ನೂ ನಡೆದಿದೆ ಎಂದು ರಸೀನ್ ನ ವಕ್ತಾರರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...