ಮೆಟಲ್ ಡಿಟೆಕ್ಟರ್ ಹೊಂದಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 222 ವರ್ಷ ಹಿಂದಿನ ಕಾಲದ ನಾಣ್ಯವನ್ನ ಭೂಮಿಯ ಆಳದಲ್ಲಿ ಪತ್ತೆ ಹಚ್ಚಿದ್ದಾರೆ. ಉತ್ತರ ಕೆರೊಲಿನಾ ಚಾರ್ಲೋಟೆ ಎಂಬಲ್ಲಿ ಈ ಘಟನೆ ನಡೆದಿದೆ.
ಲೋಹ ಪತ್ತೆ ಪ್ರವಾಸದಲ್ಲಿದ್ದ ಶೇನ್ ಹೌಟ್ಸನ್ ಮತ್ತಾತನ ಗೆಳೆಯ ಈ ನಾಣ್ಯವನ್ನ ಪತ್ತೆ ಹಚ್ಚಿದ್ದಾರೆ. 1798ರ ಕಾಲದ ಈ ನಾಣ್ಯ ಉತ್ತರ ಅಮೆರಿಕದ್ದು ಅಂತಾ ಗುರುತಿಸಲಾಗಿದೆ. ಎಂಬೆಡೆನ್ನ ಚರ್ಚ್ ಮೈದಾನದಲ್ಲಿ ಈ ನಾಣ್ಯವನ್ನ ಪತ್ತೆ ಮಾಡಲಾಗಿದೆ.
ಇನ್ನು ಇದೇ ಪ್ರವಾಸದ ವೇಳೆ 1818ರ ಕಾಲದ ಮತ್ತೊಂದು ನಾಣ್ಯ ಹಾಗೂ ಬ್ರಿಟಿಷ್ ಕಾಲದ ಮದ್ದುಗುಂಡುಗಳನ್ನ ಕಂಡು ಹಿಡಿದಿದ್ದಾರೆ.