alex Certify ಕುದುರೆ ರೇಸ್​​ ನಡೆಯುವ ವೇಳೆ ಟ್ರ್ಯಾಕ್​ನಲ್ಲಿ ನಿಂತು ಹುಚ್ಚಾಟ ಮೆರೆದ ಭೂಪ ಅರೆಸ್ಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುದುರೆ ರೇಸ್​​ ನಡೆಯುವ ವೇಳೆ ಟ್ರ್ಯಾಕ್​ನಲ್ಲಿ ನಿಂತು ಹುಚ್ಚಾಟ ಮೆರೆದ ಭೂಪ ಅರೆಸ್ಟ್….!

ನೀವೇನಾದರೂ ಕುದುರೆ ರೇಸ್​ನಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ ನಿಮಗೆ ಕುದುರೆಗಳು ರೇಸ್​ನಲ್ಲಿ ಎಷ್ಟೊಂದು ವೇಗವಾಗಿ ಓಡುತ್ತವೆ ಅನ್ನೋದಕ್ಕೆ ಹೆಚ್ಚು ವಿವರಣೆ ನೀಡಬೇಕಿಲ್ಲ.

ಕುದುರೆಗಳು ವೇಗವಾಗಿ ಓಡುತ್ತಿರುವ ವೇಳೆ ಚಿಕ್ಕ ವಸ್ತುವೊಂದು ಕುದುರೆಗೆ ಬಡಿದರೂ ಸಹ ಕುದುರೆ ಹಾಗೂ ಅದರ ಸವಾರನಿಗೆ ಗಂಭೀರವಾಗಿ ಗಾಯವಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ.

ಇದೇ ಕಾರಣಕ್ಕಾಗಿಯೆ ರೇಸ್​ ಟ್ರ್ಯಾಕ್​​ನಲ್ಲಿ ಯಾರೂ ಪ್ರವೇಶಿಸದಂತೆ ಬ್ಯಾರಿಕೇಡ್​ಗಳನ್ನ ಹಾಕಲಾಗಿರುತ್ತದೆ.

ಕ್ಯಾಮರಾಮ್ಯಾನ್​ಗಳಿಗೂ ಟ್ರ್ಯಾಕ್​ನ ಒಳಗಡೆ ಪ್ರವೇಶ ಇರೋದಿಲ್ಲ. ಆದರೆ ನ್ಯೂಜಿಲೆಂಡ್​ನಲ್ಲಿ ವ್ಯಕ್ತಿಯೊಬ್ಬ ಕುದುರೆ ಸವಾರಿ ನಡೆಯುತ್ತಿದ್ದ ಟ್ರ್ಯಾಕ್​ ಮಧ್ಯೆಯೇ ನಿಂತು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.‌

ಇಂತಹ ಭಯಾನಕ ಬಂಗಲೆಯನ್ನ ನೀವು ನೋಡಿರೋಕೆ ಸಾಧ್ಯವಿಲ್ಲ…!

ಅದೃಷ್ಟವಶಾತ್​ ಆತನಿಗಾಗಲಿ ಕುದುರೆ ಹಾಗೂ ಯಾವುದೇ ಸವಾರರಿಗೆ ಇದರಿಂದ ಹಾನಿ ಉಂಟಾಗಿಲ್ಲ. ಈ ಸಣ್ಣ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಹೀಗೆ ನಿಯಮ ಉಲ್ಲಂಘಿಸಿ ಟ್ರ್ಯಾಕ್​ ನುಗ್ಗಿದ ಈ ಭೂಪ ಇದೀಗ ಪೊಲೀಸ್​ ಅತಿಥಿಯಾಗಿದ್ದಾನೆ.

— Andrew Bensley (@AndrewBensley) January 30, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...