
ಕುದುರೆಗಳು ವೇಗವಾಗಿ ಓಡುತ್ತಿರುವ ವೇಳೆ ಚಿಕ್ಕ ವಸ್ತುವೊಂದು ಕುದುರೆಗೆ ಬಡಿದರೂ ಸಹ ಕುದುರೆ ಹಾಗೂ ಅದರ ಸವಾರನಿಗೆ ಗಂಭೀರವಾಗಿ ಗಾಯವಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ.
ಇದೇ ಕಾರಣಕ್ಕಾಗಿಯೆ ರೇಸ್ ಟ್ರ್ಯಾಕ್ನಲ್ಲಿ ಯಾರೂ ಪ್ರವೇಶಿಸದಂತೆ ಬ್ಯಾರಿಕೇಡ್ಗಳನ್ನ ಹಾಕಲಾಗಿರುತ್ತದೆ.
ಕ್ಯಾಮರಾಮ್ಯಾನ್ಗಳಿಗೂ ಟ್ರ್ಯಾಕ್ನ ಒಳಗಡೆ ಪ್ರವೇಶ ಇರೋದಿಲ್ಲ. ಆದರೆ ನ್ಯೂಜಿಲೆಂಡ್ನಲ್ಲಿ ವ್ಯಕ್ತಿಯೊಬ್ಬ ಕುದುರೆ ಸವಾರಿ ನಡೆಯುತ್ತಿದ್ದ ಟ್ರ್ಯಾಕ್ ಮಧ್ಯೆಯೇ ನಿಂತು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಇಂತಹ ಭಯಾನಕ ಬಂಗಲೆಯನ್ನ ನೀವು ನೋಡಿರೋಕೆ ಸಾಧ್ಯವಿಲ್ಲ…!
ಅದೃಷ್ಟವಶಾತ್ ಆತನಿಗಾಗಲಿ ಕುದುರೆ ಹಾಗೂ ಯಾವುದೇ ಸವಾರರಿಗೆ ಇದರಿಂದ ಹಾನಿ ಉಂಟಾಗಿಲ್ಲ. ಈ ಸಣ್ಣ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೀಗೆ ನಿಯಮ ಉಲ್ಲಂಘಿಸಿ ಟ್ರ್ಯಾಕ್ ನುಗ್ಗಿದ ಈ ಭೂಪ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.