alex Certify ಮುಕ್ಕಾಲು ಗಂಟೆಯಲ್ಲಿ 8,000 ಕ್ಯಾಲೋರಿ ಆಹಾರ ಹೊಟ್ಟೆಗಿಳಿಸಿದ ಪ್ರಚಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಕ್ಕಾಲು ಗಂಟೆಯಲ್ಲಿ 8,000 ಕ್ಯಾಲೋರಿ ಆಹಾರ ಹೊಟ್ಟೆಗಿಳಿಸಿದ ಪ್ರಚಂಡ

ಬಕಾಸುರನಂತೆ ಗಬಗಬನೇ ತಿನ್ನುವ ಚಾಲೆಂಜ್‌ಗಳೂ ಬಹಳ ಫೇಮಸ್ ಎಂಬುದು ಗೊತ್ತಿರುವ ವಿಚಾರ. ಇಂಥ ಚಾಲೆಂಜ್‌ಗಳಲ್ಲಿ ಚೆನ್ನಾಗಿ ತಿನ್ನುವ ಕಾನ್ಸೆಪ್ಟ್‌ ಏನೋ ಸಖತ್ತಾಗಿದೆ. ಆದರೆ ಹೊಟ್ಟೆ ಫಜೀತಿ ಆದ್ರೆ ಆ ಕಷ್ಟ ದೇವರಿಗೇ ಪ್ರೀತಿ.

ಸಾಮಾಜಿಕ ಜಾಲತಾಣದಲ್ಲಿ Max vs Food ಹೆಸರಿನಿಂದ ಖ್ಯಾತರಾದ ಮ್ಯಾಕ್ಸ್‌ ಸ್ಟಾನ್‌ಫೋರ್ಡ್ ಹೀಗೊಬ್ಬ ತಿನ್ನುವ ಎಕ್ಸ್‌ಪರ್ಟ್. ಭಾರೀ ಪ್ರಮಾಣದಲ್ಲಿ ತಿನ್ನುವ ವಿಚಾರದಲ್ಲಿ ಸದ್ದು ಮಾಡಿರುವ ಅವರು ಇತ್ತೀಚೆಗೆ ಐದು ಕಿಲೋ ಪೈ ಮತ್ತು ಮ್ಯಾಶ್ ತಿನ್ನುವ ಚಾಲೆಂಜ್‌ ಒಂದನ್ನು ಸ್ವೀಕರಿಸಿದ್ದರು.

ಈ ಚಾಲೆಂಜ್‌ನ ಅಂಗವಾಗಿ ಮ್ಯಾಕ್ಸ್‌ ಬರೀ 43 ನಿಮಿಷಗಳ ಅವಧಿಯಲ್ಲಿ 18 ಪೈಗಳನ್ನು ದೊಡ್ಡ ಮ್ಯಾಶ್‌ನೊಂದಿಗೆ ಸೇವಿಸಿದ್ದಲ್ಲದೇ ಜೊತೆಯಲ್ಲಿ ಸ್ವಲ್ಪ ಲಿಕ್ಕರ್‌ ಅನ್ನು ಗುಟಕೇರಿಸಿಬಿಟ್ಟಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಮ್ಯಾಕ್ಸ್‌ ತಮ್ಮ ದೇಹದೊಳಗೆ 8,000 ಕ್ಯಾಲೊರಿಗಳನ್ನು ಇಳಿಸಿಕೊಂಡಿದ್ದಾರೆ. ಈ ವಿಚಾರ ಈಗ ಬಹಳ ಚರ್ಚೆಗೂ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...