ಕ್ಷೀರಪಥವೊಂದರ (ಮಿಲ್ಕೀವೇ) ಪನೋರಮಾ ಚಿತ್ರ ರಚಿಸಲು ಫಿನ್ಲೆಂಡ್‌ನ ಛಾಯಾಗ್ರಾಹಕ ಜೆಪಿ ಮೆಟ್ಸಾವಾಯ್ನೋ 12 ವರ್ಷಗಳ ಅವಧಿಯಲ್ಲಿ 1250 ಗಂಟೆಗಳನ್ನು ವ್ಯಯಿಸಿದ್ದಾರೆ. ಇಷ್ಟೆಲ್ಲಾ ಶ್ರಮಕ್ಕೆ ಪ್ರತಿಫಲವಾಗಿ ಅತ್ಯದ್ಭುತ ಚಿತ್ರವೊಂದು ಮೂಡಿ ಬಂದಿದೆ.
ಈ ಪ್ರಾಜೆಕ್ಟ್‌ಗೆ ಶೂಟಿಂಗ್ ಅನ್ನು 2009ರಲ್ಲೇ ಮೆಟ್ಸಾವಾಯ್ನಿಯೋ ಆರಂಭಿಸಿದ್ದು, ಇದಕ್ಕೆಂದು ಹೈ-ಎಂಡ್ ಕ್ಯಾಮೆರಾ ಉಪಕರಣಗಳನ್ನು ಬಳಸಿದ್ದಾರೆ. 12 ವರ್ಷಗಳ ಈ ಅವಧಿಯಲ್ಲಿ ಈ ಛಾಯಾಗ್ರಾಹಕ ಒಂದು ಲಕ್ಷದಷ್ಟು ಮೆಗಾಪಿಕ್ಸೆಲ್‌ಗಳಷ್ಟು ಸ್ಪಷ್ಟತೆ ಇರುವ ಪನೋರಮಾ ಸೆರೆಹಿಡಿದಿದ್ದು, 234 ಮೊಸಾಯಿಕ್ ಪ್ಯಾನೆಲ್‌ಗಳನ್ನು ಒಟ್ಟುಗೂಡಿಸಿದ್ದಾರೆ.
ತನ್ನ ಈ ಅದ್ಭುತ ಕೆಲಸದಿಂದ ಈ ಛಾಯಾಗ್ರಾಹಕ ಇಡೀ ಕ್ಷೀರಪಥವನ್ನಷ್ಟೇ ಅಲ್ಲದೇ, ಅಲ್ಲಿರುವ 20 ದಶಲಕ್ಷ ನಕ್ಷತ್ರಗಳನ್ನೂ ಸಹ ಸೆರೆ ಹಿಡಿದಿದ್ದಾರೆ.
ಪೂರ್ಣ ಸ್ಪಷ್ಟತೆಯ ಚಿತ್ರವು ಮೆಟ್ಸಾವಾಯ್ನಿಯೋ ಬ್ಲಾಗ್‌ನಲ್ಲಿ ಲಭ್ಯವಿದ್ದು, ಎಲ್ಲಾ ಮೊಸಾಯಿಕ್‌ಗಳನ್ನೂ ಸೆರೆಹಿಡಿಯಲು ತಮಗೆ ಏಕೆ ಇಷ್ಟು ಅವಧಿ ಬೇಕಾಯಿತು ಎಂದು ಅದರಲ್ಲಿ ಅವರು ವಿವರಿಸಿದ್ದಾರೆ.