alex Certify ಮನೆಯಲ್ಲಿದ್ದೇ ಮೌಂಟ್ ಎವರೆಸ್ಟ್ ಏರಿದ…! ಹೇಗೆ ಅಂತ ತಿಳಿದ್ರೆ ಅಚ್ಚರಿಪಡ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿದ್ದೇ ಮೌಂಟ್ ಎವರೆಸ್ಟ್ ಏರಿದ…! ಹೇಗೆ ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಎಲ್ಲಿಯ ಲಂಡನ್ ? ಎಲ್ಲಿಯ ಮೌಂಟ್ ಎವರೆಸ್ಟ್ ? ಆದರೆ ಇಲ್ಲೊಬ್ಬ ವ್ಯಕ್ತಿ ತಾನಿರುವ ಅಪಾರ್ಟ್ ಮೆಂಟ್ ನಲ್ಲೇ ಮೌಂಟ್ ಎವರೆಸ್ಟ್ ಏರಿದ್ದಾನೆ..!

ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನೇಪಾಳ ‌ಪ್ರವಾಸ ಮತ್ತು ಎವರೆಸ್ಟ್ ಶಿಖರ ಏರುವ ಅವಕಾಶವನ್ನು ತಪ್ಪಿಸಿಕೊಂಡ ವ್ಯಕ್ತಿ ತಮ್ಮ‌ ಮನೆಯಿರುವ ಅಪಾರ್ಟ್ ಮೆಂಟನ್ನು 6506 ಬಾರಿ ಹತ್ತಿಳಿದು ಮೌಂಟ್ ಎವರೆಸ್ಟ್ ದಾರಿಯಷ್ಟು ದೂರ ಮತ್ತು ಎತ್ತರವನ್ನು ಕ್ರಮಿಸಿದ್ದಾಗಿ ಹೇಳಿಕೊಂಡಿದ್ದಾನೆ.

ಬರಹಗಾರ, ಛಾಯಾಗ್ರಾಹಕ ರಾಬ್ ಫಾರ್ಗ್ಯೂಸನ್ ಅವರು ಈ ಕೆಲಸವನ್ನು ಮೋಜಿಗಾಗಿ ಮಾಡಿದ್ದಲ್ಲ. ರಾಯಲ್ ಮೆಡಿಕಲ್ ಬೆನೆವೊಲೆಂಟ್ ನಿಧಿ ಸಂಗ್ರಹಕ್ಕಾಗಿ ಈ ಪ್ರಯತ್ನ ಮಾಡಿದರಂತೆ.

ಈ ಸಾಧನೆ ಬಹಳ ಅಗ್ಗವಾಗಿತ್ತಂತೆ. ಹಿಮವಿಲ್ಲದ ಕಾರಣ ಬೆಚ್ಚಗಿತ್ತು ಮತ್ತು ಸಾಯುವ ಅಪಾಯವಿಲ್ಲ. ಜನಸಂದಣಿ ಮತ್ತು ಕಸ ಇರಲಿಲ್ಲ ಎಂಬ ವರ್ಣನೆಯೂ ಇದೆ. ಬರಿಗಾಲಲ್ಲಿ ಹತ್ತಿದರೆಂಬುದು ವಿಶೇಷ. ಏಪ್ರಿಲ್ 9 ರಂದು ಬೆಳಿಗ್ಗೆ 7.15 ಕ್ಕೆ ಈ ಪ್ರಯತ್ನ ಪ್ರಾರಂಭವಾಯಿತು. ಇವರ ಪ್ರಯತ್ನವನ್ನು ಜನರಿಗೆ ತೋರಿಸಲು ಜೆನ್ನಿ ವರ್ಡ್ಸ್ವರ್ತ್ ಮತ್ತು ಲೂಸಿ ಆಸ್ಪ್ಡೆನ್ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...