ಕೋವಿಡ್-19 ಸಾಂಕ್ರಮಿಕದ ನಡುವೆ, ಇಂಗ್ಲೆಂಡ್‌ನಲ್ಲಿ ಮೇ 17ರಿಂದ ಪಬ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಹೊಸ ಮಾರ್ಗಸೂಚಿಗಳನ್ನು ಅರ್ಥೈಸಿಕೊಂಡು ಅವುಗಳ ಅನುಸಾರ ಪಬ್‌ಗಳಿಗೆ ಬರುವುದು ಹಿರಿಯ ನಾಗರಿಕರಿಗೆ ಬಲೇ ಕಿರಿಕಿರಿಯಾಗಿದೆ.
ಇಲ್ಲಿನ ವೆದರ್ಸ್ಪೂನ್ ಪಬ್‌ಗೆ ಭೇಟಿಯಿತ್ತ ಹಿರಿಯ ನಾಗರಿಕರೊಬ್ಬರ ಚಿತ್ರವೊಂದನ್ನು ಶೇರ್ ಮಾಡಿಕೊಂಡ ವ್ಯಕ್ತಿಯೊಬ್ಬರು, ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಂಟ್ ತರಿಸಿಕೊಳ್ಳಲು ಹೆಣಗಾಡುತ್ತಿದ್ದ ಹಿರಿಯ ವ್ಯಕ್ತಿಯ ಪರದಾಟವನ್ನು ತೆರೆದಿಟ್ಟಿದ್ದಾರೆ. ಕಾರ್ಡಿಫ್‌ನ ಅರ್ನೆಸ್ಟ್ ವಿಲ್ಲೋಸ್‌ನಲ್ಲಿ ಒಂದೂಕಾಲು ಗಂಟೆ ಕಾದರೂ ಪಿಂಟ್ ಸಿಗದ ಈ ಹಿರಿಯ ಜೀವದ ಪರದಾಟ ಕಂಡ ಮಾರ್ಕ್ ಫರ‍್ರಿಯರ್ ಎಂಬ 39ರ ವ್ಯಕ್ತಿ ಅವರ ನೆರವಿಗೆ ಬಂದಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ದೆ: ಕೋವಿಡ್ ಕುರಿತ ಅಧ್ಯಯನಕ್ಕಾಗಿ ಶವ ದಾನ
ಆ ಹಿರಿಯ ಜೀವಕ್ಕಾಗಿ ತಮ್ಮ ಫೋನ್‌ನಲ್ಲಿ ಅಪ್ಲಿಕೇಶ್ ಅನ್ನು ಬಳಸಿಕೊಂಡು ಎರಡು ಪಿಂಟ್ ಆರ್ಡರ್ ಮಾಡಿದ ಫೆರ‍್ರಿಯರ್, ಅವರೊಂದಿಗೆ ಒಂದಷ್ಟು ಹೊತ್ತು ಸಮಾಲೋಚನೆಯನ್ನೂ ನಡೆಸಿದ್ದಾರೆ. ಹಿರಿಯ ನಾಗರಿಕರಿಗೆ ಕಠಿಣ ಕೋವಿಡ್ ನಿರ್ಬಂಧಗಳಿಂದ ವಿನಾಯಿತಿ ನೀಡಬೇಕೆಂದು ಕ್ಯಾಪ್ಷನ್ ಹಾಕಿರುವ ಫೆರ‍್ರಿಯರ್, ಈ ಕಥೆಯನ್ನು ಶೇರ್ ಮಾಡಿಕೊಂಡಿದ್ದಾರೆ.