alex Certify ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ದೆ: ಕೋವಿಡ್​ ಕುರಿತ ಅಧ್ಯಯನಕ್ಕಾಗಿ ಶವ ದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ದೆ: ಕೋವಿಡ್​ ಕುರಿತ ಅಧ್ಯಯನಕ್ಕಾಗಿ ಶವ ದಾನ

ಕೊರೊನಾದಿಂದ ಮನುಷ್ಯನ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಮಾಡಲು ಕೊಲ್ಕತ್ತಾದ 93 ವರ್ಷದ ವೃದ್ಧೆ ಜ್ಯೋತ್ಸ್ಬಾ ಬೋಸ್​ ಮೃತ ದೇಹವನ್ನ ದಾನ ಮಾಡಲಾಗಿದೆ. ಈ ಮೂಲಕ ಕೋವಿಡ್​ ಅಧ್ಯಯನಕ್ಕಾಗಿ ದೇಹ ದಾನ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಜ್ಯೋತ್ಸ್ನಾಗೆ ದಕ್ಕಿದೆ.

ಜ್ಯೋತ್ಸ್ನಾ ಈ ಸಾಧನೆ ಮಾಡಿದ ಮೊದಲ ಮಹಿಳೆಯಾಗಿದ್ದರೆ ಪಶ್ಚಿಮ ಬಂಗಾಳದಲ್ಲಿ ಎರಡನೆ ನಾಗರಿಕರಾಗಿದ್ದಾರೆ. ಪಶ್ಚಿಮ ಬಂಗಾಳದ ಗಂಧಾರ್ಪಣ ಸಂಸ್ಥೆಯ ಸ್ಥಾಪಕ ಬ್ರೋಜೊ ರಾಯ್​ ಮೊದಲು ತಮ್ಮ ಮೃತದೇಹ ದಾನ ಮಾಡಿದ್ದಾರೆ. ಜ್ಯೋತ್ಸ್ನಾ ಬಳಿಕ ತಮ್ಮ ಮೃತ ದೇಹವನ್ನ ಕೋವಿಡ್ ಕುರಿತ ಅಧ್ಯಯನಕ್ಕಾಗಿ ದಾನ ಮಾಡಿದ್ದಾರೆ.

ಕೋವಿಡ್​ ಸೋಂಕು ಉಲ್ಬಣ ಹಿನ್ನೆಲೆ ಜ್ಯೋತ್ಸ್ನಾ ಮೇ 14ರಂದು ಉತ್ತರ ಕೊಲ್ಕತ್ತಾ ಭಾಗದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದರು.

ನನ್ನ ಅಜ್ಜಿಯ ಶವ ಪರೀಕ್ಷೆಯನ್ನ ಆರ್​.ಜಿ ಕಾರ್​ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆಸಲಾಯ್ತು. ಕೊರೊನಾದಿಂದ ಸಾವನ್ನಪ್ಪಿದ ಬಳಿಕ ರೋಗದ ಕುರಿತ ಅಧ್ಯಯನಕ್ಕಾಗಿ ಶವ ದಾನ ಮಾಡಿದ ಮೊದಲ ಮಹಿಳೆ ಎಂಬ ಕೀರ್ತಿಗೆ ನನ್ನ ಅಜ್ಜಿ ಪಾತ್ರರಾಗಿದ್ದಾರೆ ಎಂದು ಅವರ ಮೊಮ್ಮಗಳು ಡಾ. ತಿಸ್ತಾ ಬಸು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...