alex Certify ಮಾಜಿ ಗೆಳತಿಯ ಮನಗೆಲ್ಲಲು ʼದ್ವೀಪʼವನ್ನೇ ನಿರ್ಮಿಸಿದ ಪ್ರೇಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಗೆಳತಿಯ ಮನಗೆಲ್ಲಲು ʼದ್ವೀಪʼವನ್ನೇ ನಿರ್ಮಿಸಿದ ಪ್ರೇಮಿ

ಮಾಜಿ ಗೆಳತಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಅನೇಕ ಯುವಕರು ತರಹೇವಾರಿ ರೀತಿಯ ಪ್ಲಾನ್​ ಮಾಡ್ತಾರೆ. ಆದರೆ ಯಾವೊಬ್ಬ ಯುವಕನೂ ಇಲ್ಲಿಯವರೆಗೆ 30 ವರ್ಷದ ಕ್ಸು ಮಾಡಿದಂತಹ ಅಮೋಘ ಪ್ರಯತ್ನವನ್ನ ಮಾಡಿರೋಕೆ ಸಾಧ್ಯವೇ ಇಲ್ಲ.

ಚೀನಾದ ಕ್ಸು ಎಂಬವರು ತನ್ನ ಮಾಜಿ ಪ್ರೇಯಸಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಆಕೆಗಾಗಿ ದ್ವೀಪವನ್ನೇ ನಿರ್ಮಿಸಿದ್ದರು. ಆದರೆ ಈ ಪ್ರಯತ್ನದ ಬಳಿಕವೂ ಕ್ಸು ತನ್ನ ಮಾಜಿ ಗೆಳತಿಯ ಪ್ರೀತಿ ಸಂಪಾದಿಸುವಲ್ಲಿ ವಿಫಲರಾಗಿದ್ದರು.

ಕ್ಸುಗೆ ಸೇರಿದ ಈ ದ್ವೀಪ ಮಾಜಿ ಪ್ರೇಯಸಿಯ ಮನಗೆಲ್ಲುವಲ್ಲಿ ವಿಫಲವಾಗಿದ್ದು ನಿಜ. ಆದರೆ ಇದೀಗ ಈ ಜಾಗ ಅದೆಷ್ಟೋ ಪ್ರೇಮಿಗಳಿಗೆ, ನವವಿವಾಹಿತರಿಗೆ ಫೇವರಿಟ್​ ತಾಣವಾಗಿ ಬದಲಾಗಿದೆ.

ಈ ದ್ವೀಪವು ಯೆಂಗ್ಡೆ ನಗರದ ಹೆಟೋ ಎಂಬ ಗ್ರಾಮದಲ್ಲಿದೆ. ಈ ತಾಣ ಚೀನಾದ ಫೇಮಸ್​​ ರೊಮ್ಯಾಂಟಿಕ್​ ಸ್ಥಳಗಳ ಪೈಕಿ ಸ್ಥಾನ ಪಡೆದುಕೊಂಡಿದೆ. ಈ ಜಾಗದಲ್ಲಿ ಆಕರ್ಷಕ ಫೋಟೋಶೂಟ್​ಗಳನ್ನ ಮಾಡಲಾಗ್ತಿದೆ

2020ರಲ್ಲಿ ಸಂಬಂಧ ಮುರಿದುಕೊಂಡ ಬಳಿಕ ಕ್ಸು ತನ್ನ ವಯಸ್ಸಾದ ಪೋಷಕರನ್ನ ನೋಡಿಕೊಳ್ಳುವ ಸಲುವಾಗಿ ತವರೂರಿಗೆ ಮರಳಿದ್ದರು. ಆದರೆ ಕ್ಸು ಈ ಸಂಬಂಧವನ್ನ ಕಡಿದುಕೊಳ್ಳಲು ತಯಾರಿರಲಿಲ್ಲ. ಹೀಗಾಗಿ ತನ್ನ ಪ್ರೇಯಸಿಯಾಗಿ ಬರೋಬ್ಬರಿ 1124598.58 ರೂಪಾಯಿ ಖರ್ಚು ಮಾಡಿ ಈ ದ್ವೀಪ ನಿರ್ಮಿಸಿದ್ದಾರೆ.

ಈ ಕೆಲಸಕ್ಕಾಗಿ ಬಿಲ್ಡರ್​ಗಳನ್ನ ನೇಮಿಸಿಕೊಂಡ ಕ್ಸು ದ್ವೀಪದಲ್ಲಿ ಆಕರ್ಷಕ ಬ್ರಿಡ್ಜ್​ಗಳನ್ನ ನಿರ್ಮಿಸಿದ್ದಾರೆ. ಸಂಪೂರ್ಣ ದ್ವೀಪವನ್ನ ಬಣ್ಣದ ಹೂವಿನ ಗಿಡಗಳಿಂದ ಅಲಂಕರಿಸಲಾಗಿದೆ. 20-30 ಚದರ ಮೀಟರ್​ ವಿಸ್ತೀರ್ಣದ ಈ ದ್ವೀಪದಲ್ಲಿ ಚೆರ್ರಿ ಗಿಡಗಳು, ಗುಲಾಬಿ ಬಣ್ಣದ ಗಿಡಗಳಿಂದ ಅಲಂಕರಿಸಲಾಗಿತ್ತು. ಆದರೆ ಇಷ್ಟೆಲ್ಲ ಪ್ರಯತ್ನದ ಬಳಿಕವೂ ಕ್ಸು ಪ್ರೇಮ ನಿವೇದನೆಯನ್ನ ಮಾಜಿ ಪ್ರೇಯಸಿ ನಿರಾಕರಿಸಿದ್ದಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...