ಮಾಜಿ ಗೆಳತಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಅನೇಕ ಯುವಕರು ತರಹೇವಾರಿ ರೀತಿಯ ಪ್ಲಾನ್ ಮಾಡ್ತಾರೆ. ಆದರೆ ಯಾವೊಬ್ಬ ಯುವಕನೂ ಇಲ್ಲಿಯವರೆಗೆ 30 ವರ್ಷದ ಕ್ಸು ಮಾಡಿದಂತಹ ಅಮೋಘ ಪ್ರಯತ್ನವನ್ನ ಮಾಡಿರೋಕೆ ಸಾಧ್ಯವೇ ಇಲ್ಲ.
ಚೀನಾದ ಕ್ಸು ಎಂಬವರು ತನ್ನ ಮಾಜಿ ಪ್ರೇಯಸಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಆಕೆಗಾಗಿ ದ್ವೀಪವನ್ನೇ ನಿರ್ಮಿಸಿದ್ದರು. ಆದರೆ ಈ ಪ್ರಯತ್ನದ ಬಳಿಕವೂ ಕ್ಸು ತನ್ನ ಮಾಜಿ ಗೆಳತಿಯ ಪ್ರೀತಿ ಸಂಪಾದಿಸುವಲ್ಲಿ ವಿಫಲರಾಗಿದ್ದರು.
ಕ್ಸುಗೆ ಸೇರಿದ ಈ ದ್ವೀಪ ಮಾಜಿ ಪ್ರೇಯಸಿಯ ಮನಗೆಲ್ಲುವಲ್ಲಿ ವಿಫಲವಾಗಿದ್ದು ನಿಜ. ಆದರೆ ಇದೀಗ ಈ ಜಾಗ ಅದೆಷ್ಟೋ ಪ್ರೇಮಿಗಳಿಗೆ, ನವವಿವಾಹಿತರಿಗೆ ಫೇವರಿಟ್ ತಾಣವಾಗಿ ಬದಲಾಗಿದೆ.
ಈ ದ್ವೀಪವು ಯೆಂಗ್ಡೆ ನಗರದ ಹೆಟೋ ಎಂಬ ಗ್ರಾಮದಲ್ಲಿದೆ. ಈ ತಾಣ ಚೀನಾದ ಫೇಮಸ್ ರೊಮ್ಯಾಂಟಿಕ್ ಸ್ಥಳಗಳ ಪೈಕಿ ಸ್ಥಾನ ಪಡೆದುಕೊಂಡಿದೆ. ಈ ಜಾಗದಲ್ಲಿ ಆಕರ್ಷಕ ಫೋಟೋಶೂಟ್ಗಳನ್ನ ಮಾಡಲಾಗ್ತಿದೆ
2020ರಲ್ಲಿ ಸಂಬಂಧ ಮುರಿದುಕೊಂಡ ಬಳಿಕ ಕ್ಸು ತನ್ನ ವಯಸ್ಸಾದ ಪೋಷಕರನ್ನ ನೋಡಿಕೊಳ್ಳುವ ಸಲುವಾಗಿ ತವರೂರಿಗೆ ಮರಳಿದ್ದರು. ಆದರೆ ಕ್ಸು ಈ ಸಂಬಂಧವನ್ನ ಕಡಿದುಕೊಳ್ಳಲು ತಯಾರಿರಲಿಲ್ಲ. ಹೀಗಾಗಿ ತನ್ನ ಪ್ರೇಯಸಿಯಾಗಿ ಬರೋಬ್ಬರಿ 1124598.58 ರೂಪಾಯಿ ಖರ್ಚು ಮಾಡಿ ಈ ದ್ವೀಪ ನಿರ್ಮಿಸಿದ್ದಾರೆ.
ಈ ಕೆಲಸಕ್ಕಾಗಿ ಬಿಲ್ಡರ್ಗಳನ್ನ ನೇಮಿಸಿಕೊಂಡ ಕ್ಸು ದ್ವೀಪದಲ್ಲಿ ಆಕರ್ಷಕ ಬ್ರಿಡ್ಜ್ಗಳನ್ನ ನಿರ್ಮಿಸಿದ್ದಾರೆ. ಸಂಪೂರ್ಣ ದ್ವೀಪವನ್ನ ಬಣ್ಣದ ಹೂವಿನ ಗಿಡಗಳಿಂದ ಅಲಂಕರಿಸಲಾಗಿದೆ. 20-30 ಚದರ ಮೀಟರ್ ವಿಸ್ತೀರ್ಣದ ಈ ದ್ವೀಪದಲ್ಲಿ ಚೆರ್ರಿ ಗಿಡಗಳು, ಗುಲಾಬಿ ಬಣ್ಣದ ಗಿಡಗಳಿಂದ ಅಲಂಕರಿಸಲಾಗಿತ್ತು. ಆದರೆ ಇಷ್ಟೆಲ್ಲ ಪ್ರಯತ್ನದ ಬಳಿಕವೂ ಕ್ಸು ಪ್ರೇಮ ನಿವೇದನೆಯನ್ನ ಮಾಜಿ ಪ್ರೇಯಸಿ ನಿರಾಕರಿಸಿದ್ದಳು.