ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನಾವು ನೋಡುವ ರೀತಿಯೇ ಬದಲಾಗಿದೆ. ವಾಸ್ತವಕ್ಕೆ ಅತ್ಯಂತ ನಿಕಟವಾದಂಥ ದೃಶ್ಯಾನುಭವವನ್ನು ಈ ವಿಆರ್ ತಂತ್ರಜ್ಞಾನ ಕೊಡಮಾಡುತ್ತಿದೆ.
ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ ವಿಆರ್ ಮೂಲಕ ದಿವಂಗತರಾದ ತಮ್ಮ ಮಡದಿಯನ್ನು ಕೂಡಿಕೊಳ್ಳುತ್ತಿರುವ ಭಾವನಾತ್ಮಕ ಸೀನ್ ಒಂದರ ವಿಡಿಯೋ ವೈರಲ್ ಆಗಿದೆ. ಕಿಮ್ ಜಂಗ್ ಸೂ ಹೆಸರಿನ ಈ ವ್ಯಕ್ತಿಯ ಮಡದಿ ಗಂಭೀರ ಕಾಯಿಲೆಯ ಕಾರಣದಿಂದ ಇತ್ತೀಚೆಗೆ ಮೃತರಾಗಿದ್ದರು.
ನವಜೋಡಿಯನ್ನು ಕೈ ಬೀಸಿ ಕರೆಯುತ್ತೆ ಈ ರೊಮ್ಯಾಂಟಿಕ್ ಸ್ಥಳ
ಅಗಲಿದ ಪ್ರೀತಿಪಾತ್ರರನ್ನು ಹೀಗೆ ವರ್ಚುವಲ್ ರಿಯೂನಿಯನ್ ಮುಖಾಂತರ ನಿಜಜೀವನದಲ್ಲಿ ಕಂಡಂತೆಯೇ ಕಾಣುವಂಥ ಅನುಭವಗಳ ಟಿವಿ ಡಾಕ್ಯುಮೆಂಟರಿಯ ಭಾಗವಾಗಿ ಈ ವಿಡಿಯೋ ಮಾಡಲಾಗಿದೆ.