![](https://kannadadunia.com/wp-content/uploads/2021/03/WhatsApp-Image-2021-03-15-at-11.08.44-AM.jpeg)
ಹೊಸ ಕಾರ್ಡ್ ಬಂದ ಕೂಡಲೇ ಮುಂದಿನ ಕೆಲಸ ಅಂದರೆ ಪಿನ್ ಜನರೇಟ್ ಮಾಡೋದು. ಆದರೆ ಇದೆಲ್ಲ ಬ್ಯಾಂಕ್ ಒಂದೇ ಡೆಬಿಟ್ ಕಾರ್ಡ್ನ್ನ ಕಳಿಸಿದಾಗ ಆರಾಮಾಗಿ ಮಾಡುವ ಕೆಲಸಗಳು. ಒಂದು ವೇಳೆ ನಿಮ್ಮ ಬ್ಯಾಂಕ್ ದಿನಕ್ಕೊಂದರಂತೆ ಕಾರ್ಡ್ಗಳನ್ನ ನಿಮಗೆ ಕಳುಹಿಸುತ್ತಲೇ ಹೋದರೆ ಏನು ಮಾಡ್ತೀರಾ..?
ಇಂತಹದ್ದೇ ಒಂದು ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ್ದಾರೆ. ರೆಡಿಟ್ನಲ್ಲಿ ತಮಗಾದ ಈ ವಿಚಿತ್ರ ಅನುಭವವನ್ನ ಫೋಟೋ ಮೂಲಕ ಶೇರ್ ಮಾಡಿದ್ದಾರೆ. ಡೆಬಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದ ಈ ವ್ಯಕ್ತಿಗೆ ಬ್ಯಾಂಕ್ ಬರೋಬ್ಬರಿ 64 ಹೊಸ ಡೆಬಿಟ್ ಕಾರ್ಡ್ಗಳನ್ನ ಕಳುಹಿಸಿಕೊಟ್ಟಿದೆ.
ಪೀಟರ್ ಎಂಬವರು ಈ ರೀತಿ ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್ ಒಂದು ಕಾರ್ಡ್ ಕಳಿಸೋದ್ರ ಬದಲಾಗಿ ದಿನಕ್ಕೊಂದರಂತೆ ಒಟ್ಟು 64 ಕಾರ್ಡ್ಗಳನ್ನ ಕಳುಹಿಸುತ್ತಲೇ ಹೋಗಿದೆ.